ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಆಗಮಿಸಿದ್ದಾರೆ. ಈ ಹಿನ್ನೆಲೆ ಭದ್ರತೆ ಹಾಗೂ ಪ್ರಧಾನಿ ಅವರನ್ನು ಜಿಲ್ಲೆಗೆ ಅದ್ಧೂರಿಯಾಗಿ ಸ್ವಾಗತಿಸುವ ಸಲುವಾಗಿ ಉಡುಪಿ ಸಕಲವಾಗಿ ಸಿದ್ಧಗೊಂಡಿತ್ತು. ಕೃಷ್ಣನೂರಿನ ಬೀದಿ ಬೀದಿಗಳಲ್ಲಿ ಮೋದಿ ಅವರನ್ನು ಸ್ವಾಗತಿಸುವ ಫ್ಲೆಕ್ಸ್ಗಳು ರಾರಾಜಿಸಿದವು. ಇದರ ಮಧ್ಯೆ ಉಡುಪಿಯ ಕಲಾವಿದ ಶ್ರೀನಾಥ್ ಅವರು ಧಾನ್ಯಗಳಿಂದ ರಚಿಸಿರುವ ಪ್ರಧಾನಿ ಮೋದಿ ಅವರ ಭಾವಚಿತ್ರವೊಂದು ಎಲ್ಲರ ಗಮನ ಸೆಳೆಯಿತು. ಪ್ರಧಾನಿ ನರೇಂದ್ರ ಮೋದಿ ಆಗಮಿಸಿರುವ ಹಿನ್ನೆಲೆಯಲ್ಲಿ ಅವರನ್ನು ವಿಶಿಷ್ಟವಾಗಿ ಸ್ವಾಗತಿಸುವ ಉದ್ದೇಶದಿಂದ ಕಲಾವಿದ ಶ್ರೀನಾಥ್ ಮಣಿಪಾಲ ಅವರು, ವಿಶಿಷ್ಟವಾದ ಕಲಾಕೃತಿ ರಚಿಸಿದ್ದರು. ಈ ಕಲಾಕೃತಿಯನ್ನು ರಚಿಸಲು ಸುಮಾರು 20 ಕೆಜಿ ಧಾನ್ಯಗಳನ್ನು ಬಳಸಿದ್ದಾರೆ. ವಿವಿಧ ವರ್ಣದ ಧಾನ್ಯಗಳನ್ನು ಪೋಣಿಸಿ ಮೋದಿ ಅವರ 6 ಅಡಿ ಎತ್ತರದ ಭಾವಚಿತ್ರವನ್ನು ರಚಿಸಿದ್ದಾರೆ. ಕಲಾಕೃತಿ ರಚನೆಯಲ್ಲಿ ಕಲಾವಿದ ರವಿ ಹಿರೇಬೆಟ್ಟು ಸಹಕರಿಸಿದ್ದಾರೆ. ಈ ಕಲಾಕೃತಿಯನ್ನು ಶ್ರೀ ಕೃಷ್ಣ ಮಠದ ಆವರಣದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.ಇದನ್ನೂ ನೋಡಿ: ಇವರು ಭಾರತದ ಕ್ರೋಶೆ ರಾಣಿ: ಗಿನ್ನೆಸ್ ವಿಶ್ವ ದಾಖಲೆ ಬರೆದ ಸಕೀಲಾ ಬಾನೋ; ಇವರ ಕಲೆಯಿಂದಲೇ ಬರುತ್ತಿದೆ ವರ್ಷಕ್ಕೆ 10 ಲಕ್ಷ ಆದಾಯ!
Be the first to comment