ರುದ್ರಪ್ರಯಾಗ: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರಘಾಟಿ ಮತ್ತು ಬಾಬಾ ಕೇದಾರನಾಥ ಧಾಮದಲ್ಲಿ ಕಳೆದ 24 ಗಂಟೆಯಿಂದ ಭಾರಿ ಹಿಮಪಾತವಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಜೊತೆಗೆ ಕೇದಾರನಾಥ ಧಾಮಕ್ಕೆ ಹೋಗುವ ಎಲ್ಲ ಪಾದಚಾರಿ ಮಾರ್ಗಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಆದರೆ ಹಿಮಪಾತದಿಂದ ಬೆಳ್ಳಿ ಹೊದಿಕೆ ಹೊದಿಸಿದಂತೆ ಕೇದಾರನಾಥ ಬೆಟ್ಟಗಳು ಮತ್ತಷ್ಟು ನೈಸರ್ಗಿಕ ಸೌಂದರ್ಯದಿಂದ ಹೊಳೆಯುತ್ತಿವೆ.ಕೇದಾರನಾಥ ಧಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗಿದ್ದರಿಂದ ಸುಮಾರು ನಾಲ್ಕು ಅಡಿಯಷ್ಟು ಹಿಮ ಸಂಗ್ರಹವಾಗಿದೆ. ಕೇದಾರನಾಥ ದೇವಾಲಯದ ಆವರಣದಲ್ಲಿ ಮೊಣಕಾಲು ಉದ್ಧದವರೆಗೆ ಹಿಮ ಇದೆ. ಇನ್ನು ಇಲ್ಲಿನ ತಾಪಮಾನವು ಶೂನ್ಯಕ್ಕಿಂತ ಕಡಿಮೆಯಿದೆ. ಹವಾಮಾನ ವೈಪರೀತ್ಯದ ಮಧ್ಯೆಯೂ ರುದ್ರಪ್ರಯಾಗ ಪೊಲೀಸರು ಮತ್ತು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ರಕ್ಷಣಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ದೇವಾಲಯದ ಭದ್ರತೆಗಾಗಿ ಭದ್ರತಾ ಸಿಬ್ಬಂದಿ ನಿರಂತರವಾಗಿ ಹಿಮದಲ್ಲಿ ಗಸ್ತು ತಿರುಗುತ್ತಿದ್ದಾರೆ. ಇನ್ನು ಹಿಮದಿಂದ ಆವೃತವಾದ ರಸ್ತೆಗಳಲ್ಲಿ ತೆರವುಗೊಳಿಸಿ ಮೂಲಸೌಕರ್ಯಗಳ ಸುಗಮ ಕಾರ್ಯನಿರ್ವಹಣೆಗೆ ಭದ್ರತಾ ಸಿಬ್ಬಂದಿ ನಿರಂತರವಾಗಿ ಹರಸಹಾಸ ಪಡುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಮತ್ತು ಐಟಿಬಿಪಿಯ ಜಂಟಿ ತಂಡವು ಸಂಪೂರ್ಣವಾಗಿ ಸಿದ್ಧವಾಗಿದೆ. ಇದನ್ನೂ ಓದಿ: ವರ್ಷಾಂತ್ಯದಲ್ಲಿ ನೀವು ಭೇಟಿ ನೀಡಬೇಕಾದ ಗಮಸೆಳೆಯುವ ಸ್ಥಳಗಳಿವು: ಫ್ಯಾಮಿಲಿ ಟ್ಯೂರ್ಗೆ ಉತ್ತಮ ಆಯ್ಕೆ
Comments