ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಬಯಲು ಸೀಮೆಯ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಜಲಪಾತವೊಂದರ ಸೌಂದರ್ಯವನ್ನು ಸವಿಯುವ ಅದ್ಭುತ ಅವಕಾಶ ಸಿಕ್ಕಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ಕ್ಷೇತ್ರವು ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರ. ಇಲ್ಲಿ ನಾಗಾರಾಧನೆಗೆಂದೇ ಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ವಾರಾಂತ್ಯದಲ್ಲಂತೂ ಭಕ್ತರ ಸಂಖ್ಯೆಯೇ ಹೆಚ್ಚಾಗಿಯೇ ಇರುತ್ತೆ. ಹೀಗೆ ದೇವರ ದರ್ಶನಕ್ಕೆಂದು ಬರುವ ಭಕ್ತರು ಕ್ಷೇತ್ರದಿಂದ ಕೇವಲ 2 ಕಿಲೋ ಮೀಟರ್ ಅಂತರದಲ್ಲಿ ಸುಂದರ ಜಲಧಾರೆಯನ್ನು ಅನುಭವಿಸಬಹುದು.ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂ: ಹೌದು. ಇಲ್ಲೇ ದೇವಾಲಯದ ಪಕ್ಕದಲ್ಲೇ ಇರುವ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನ ಮಾಹಿತಿ ಕೆಲವರಿಗೆ ಗೊತ್ತಿಲ್ಲ. ತಿಳಿದವರು ಡ್ಯಾಂಗೆ ಭೇಟಿ ನೀಡಿ ನೀರಿನಲ್ಲಿ ಆಟ ಆಡಿ ಖುಷಿ ಖುಷಿಯಾಗಿ ವಾಪಸ್ ಆಗುತ್ತಾರೆ. ಇನ್ನು ಕಳೆದ ಒಂದು ತಿಂಗಳಿನಿಂದ ಮಳೆ ಆಗುತ್ತಿರುವ ಹಿನ್ನೆಲೆ ಹಳ್ಳಕೊಳ್ಳಗಳು ತುಂಬಿವೆ. ಪರಿಣಾಮ ಡ್ಯಾಂನ ಮೇಲಿಂದ ಹಾಲಿನ ನೊರೆಯಂತೆ ನೀರು ಹರಿಯುತ್ತಿದೆ. ಆದರೆ ಯಾವುದೇ ತಡೆ ಗೋಡೆ ಇಲ್ಲದಿರುವುದರಿಂದ ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಇದನ್ನೂ ಓದಿ: ಕನ್ನಡದಲ್ಲಿ ಮಿರರ್ ಇಮೇಜ್ ಶೈಲಿಯಲ್ಲಿ ಭಗವದ್ಗೀತೆ ಬರೆದ ಮಹಾರಾಷ್ಟ್ರದ ಭಕ್ತ
Be the first to comment