ರಾಯಚೂರು: ಹಾವು ಕಂಡರೆ ಎಲ್ಲರೂ ಭಯಪಡುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಮನೆ ಮುಂದೆ ಪ್ರತ್ಯಕ್ಷವಾದ ನಾಗರಹಾವಿಗೆ ಪೂಜೆ ಸಲ್ಲಿಸಿರುವ ಅಪರೂಪದ ಘಟನೆ ನಡೆದಿದೆ.ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಜಂಗಿರಾಂಪೂರು ತಾಂಡಾದಲ್ಲಿ ಸೋಮವಾರ ಈ ಘಟನೆ ನಡೆದಿದೆ. ತಾಂಡದ ನಿವಾಸಿಯಾಗಿರುವ ಸುನೀಲ್ ಪವಾರ್ ಎನ್ನುವರ ಮನೆಯ ಮುಂದೆ ನಾಗರಹಾವು ಪ್ರತ್ಯಕ್ಷವಾಗಿದ್ದು, ಎಲ್ಲರೂ ಭಯಭೀತರಾಗಿದ್ದರು. ಆಗ ಉರಗರಕ್ಷಕರಿಗೆ ಮಾಹಿತಿ ನೀಡಿದ್ದು, ಉರಗ ರಕ್ಷಕ ಮನೆಗೆ ಆಗಮಿಸಿದ್ದರು.ಆದರೆ ಹಾವನ್ನು ಸೆರೆ ಹಿಡಿಯುವುದಕ್ಕೂ ಮುನ್ನ ಸುನೀಲ್ ಪವಾರ್ ನಾಗರಹಾವಿಗೆ ಪೂಜೆ ಮಾಡಿ ಆರಾಧಿಸಿದ್ದಾರೆ. ಮನೆಯ ಮುಂದೆ ನಾಗಪ್ಪ ಬಂದಿದ್ದಾನೆ ಎಂದು ಮನೆಯ ಮಾಲೀಕ ಹೆಡೆಯೆತ್ತಿ ನಿಂತಿದ್ದ ಹಾವಿಗೆ ಪೂಜೆ ಮಾಡಿದ್ದಾರೆ. ಕಾಯಿ ಒಡೆದು ನಮಸ್ಕರಿಸಿದ್ದಾರೆ. ಈ ವೇಳೆ ಹಾವು ಕೂಡ ಹೆಡೆ ಎತ್ತಿ ನಿಂತು ಪೂಜೆ ಸ್ವೀಕರಿಸಿದಂತೆ ಕಂಡು ಬಂದಿದೆ. ಅಲ್ಲದೇ ಗ್ರಾಮಸ್ಥರು ಈ ಅಪರೂಪದ ದೃಶ್ಯ ನೋಡಲು ಮುಗಿಬಿದ್ದಿದ್ದರು. ಪೂಜೆ ಬಳಿಕ ಉರಗರಕ್ಷಕ ಹಾವನ್ನು ಹಿಡಿದು ಕೊಂಡೊಯ್ದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಮನೆಯ ಮಾಲೀಕ ಹಾವಿಗೆ ಪೂಜೆ ಮಾಡುವುದನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.ಇದನ್ನೂ ನೋಡಿ: ಆನೇಕಲ್: ಚಪ್ಪಲಿಯಲ್ಲಿದ್ದ ಕೊಳಕು ಮಂಡಲ ಕಚ್ಚಿ ಟೆಕ್ಕಿ ಸಾವು
Be the first to comment