ಚಾಮರಾಜನಗರ: ದೇಶದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಸಫಾರಿ ಜೀಪನ್ನು ಕಾಡಾನೆ ಅಟ್ಟಾಡಿಸಿದೆ. ನೋಡ ನೋಡುತ್ತಿದ್ದಂತೆ ಸಫಾರಿ ವಾಹನದ ಮೇಲೆರಗಿ ಬಂದ ಕಾಡಾನೆ ಕಂಡು ಪ್ರವಾಸಿಗರು ಭಯಭೀತರಾದರು.ಕಾಡಿನಲ್ಲಿ ತನ್ನ ಪಾಡಿಗೆ ತಾನು ಮೇಯುತ್ತಿದ್ದ ಆನೆ, ಸಫಾರಿ ವಾಹನ ಕಂಡ ಕ್ಷಣಾರ್ಧದಲ್ಲೇ ದಿಢೀರನೇ ಅಟ್ಯಾಕ್ ಮಾಡಿದೆ. ಸಫಾರಿ ಜೀಪ್ ಚಾಲಕ ಸಮಯ ಪ್ರಜ್ಞೆ ಮೆರೆದು ಪ್ರವಾಸಿಗರನ್ನು ಸೇಫ್ ಮಾಡಿದ್ದಾರೆ. ಚಾಲಕ ಸಫಾರಿ ವಾಹನವನ್ನು ರಿವರ್ಸ್ ಗೇರ್ನಲ್ಲಿ ಚಲಾಯಿಸಿದ್ದರಿಂದ ಆನೆ ದಾಳಿಯಿಂದ ಪ್ರವಾಸಿಗರು ಬಚಾವ್ ಆಗಿದ್ದಾರೆ.ಸೀಳುನಾಯಿಗಳ ರಣ ಬೇಟೆ: ಕೆರೆಗೆ ನೀರು ಕುಡಿಯಲು ಬಂದ ಜಿಂಕೆಯನ್ನು ಸೀಳುನಾಯಿಗಳು ಬೇಟೆಯಾಡಿ, ಭಕ್ಷಿಸಿದ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಣಿಯನಪುರ ಕಾಲೋನಿ ಸಮೀಪದ ಮಹದೇಶ್ವರ ದೇವಸ್ಥಾನದ ಕೆರೆಯಲ್ಲಿ ನಡೆದಿದೆ. ಸ್ಥಳೀಯರೊಬ್ಬರು ಸೀಳುನಾಯಿಗಳ ದೃಶ್ಯ ಸೆರೆ ಹಿಡಿದಿದ್ದಾರೆ. ನೀರನ್ನರಸಿ ಬಂದ ಜಿಂಕೆಯನ್ನು ಕಂಡ ಸೀಳು ನಾಯಿಗಳ ಹಿಂಡು ದಾಳಿ ನಡೆಸಿವೆ. ಜಿಂಕೆಯನ್ನು ಬೇಟೆಯಾಡಿದ್ದನ್ನು ಕಂಡ ಗ್ರಾಮದ ಬೀದಿನಾಯಿಗಳು ಕೆರೆ ಸಮೀಪ ಬಂದಂತ ವೇಳೆ ಸೀಳುನಾಯಿಗಳನ್ನು ಹಿಮ್ಮೆಟ್ಟಿಸಿವೆ.ಇದನ್ನೂ ಓದಿ: ಮತ್ತೆ ಫೀಲ್ಡ್ಗಿಳಿದ ಒಂಟಿ ಸಲಗ: ಊಟಿಗೆ ತೆರಳುವ ಮಾರ್ಗ ಮಧ್ಯೆ ಗಜರಾಜ ಕಿರಿಕ್
Be the first to comment