Skip to playerSkip to main content
  • 3 months ago
ಮೈಸೂರು: ತಿ.ನರಸೀಪುರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಹಾಲರವಿ ಉತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ದೀಪಾವಳಿ ಹಬ್ಬದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಹಬ್ಬವನ್ನು ಏರ್ಪಡಿಸಲಾಗಿತ್ತು. ಗ್ರಾಮದ ಮಲೆ ಮಹದೇಶ್ವರ ದೇವಾಲಯದಲ್ಲಿ ಮುಂಜಾನೆ ಮಾದೇಶ್ವರನಿಗೆ ಪ್ರಿಯವಾದ ಬಿಲ್ವಾರ್ಚನೆ, ರುದ್ರಾಭಿಷೇಕ, ಪುಷ್ಪಾರ್ಚನೆ, ಗಂದಾಭಿಷೇಕ ಪೂರೈಸಿ ಮಹಾಮಂಗಳಾರತಿ ಮಾಡಲಾಯಿತು‌.  ಗ್ರಾಮದ ವಾಡಿಕೆಯಂತೆ, ಮಲೆಮಹದೇಶ್ವರ ಸ್ವಾಮಿ ಅವರ ದೀವಟಿಗೆ ಸೇವೆ ಮಾಡಲಾಯಿತು. ಶ್ರೀ ಪಾತಾಳೇಶ್ವರ ಹಾಗೂ ಶ್ರೀ ಕಾಳಿಕಾಂಭ ದೇವಿ ಅವರ ಅರ್ಚಕರೂ ದೀವಟಿಗೆ ಸೇವೆಯಲ್ಲಿ ಪಾಲ್ಗೊಂಡರು. ಅಲಂಕೃತ ಪುಟಾಣಿ ಹೆಣ್ಣು ಮಕ್ಕಳು ಹಾಲರವಿ ಹೊತ್ತು ತಂದರು. ಸಪ್ತಮಾತೃಕೆಯರ ದೇವಾಲಯದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ಮಹದೇಶ್ವರ ದೇವಾಲಯ ತಲುಪಿತು. ವೀರಗಾಸೆ, ಕಂಸಾಳೆ, ಜಾನಪದ ಗಾಯನ ತಂಡಗಳು ಕಲಾ ಮೆರಗು ಹೆಚ್ಚಿಸಿದವು. ಮಧ್ಯಾಹ್ನದ ಹೊತ್ತಿಗೆ ದೇವಾಲಯದ ಆವರಣದಲ್ಲಿ ಮಹದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಹುಲಿವಾಹನದಲ್ಲಿ ಕುಳ್ಳಿರಿಸಿ ದೇವಾಲಯದ ಸುತ್ತ ಪ್ರದಕ್ಷಿಣೆ ಮಾಡಲಾಯಿತು.     ಎಣ್ಣೆ ಮಜ್ಜನ ಸೇವೆ : ಇದಕ್ಕೂ ಮುನ್ನ ಮಹದೇಶ್ವರನ ಸನ್ನಿಧಿಯಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ಸಂಭ್ರಮ ಮನೆ ಮಾಡಿತ್ತು. ಸೋಮವಾರ ನರಕ ಚತುರ್ದಶಿ ಅಂಗವಾಗಿ ಸ್ವಾಮಿಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಸೋಮವಾರ ಭಕ್ತರು ಪಂಜಿನ ಸೇವೆ ಮಾಡಿದರು. ರಾತ್ರಿ ಎಣ್ಣೆ ಮಜ್ಜನ ನೆರವೇರಿಸಿ ಪೂಜೆ ಸಲ್ಲಿಸಲಾಯಿತು. 

Category

🗞
News
Transcript
00:00Oh
Be the first to comment
Add your comment

Recommended