Skip to playerSkip to main content
  • 4 months ago
ಕೊಲ್ಲಾಪುರ (ಮಹಾರಾಷ್ಟ್ರ): ಕೊಲ್ಲಾಪುರದಾದ್ಯಂತ ಶರದಿಯಾ ನವರಾತ್ರಿ ಉತ್ಸವ ಪ್ರಾರಂಭವಾಗಿದೆ. ಶಕ್ತಿ ಪೀಠಗಳಲ್ಲಿ ಒಂದಾದ ಶ್ರೀ ಮಹಾಲಕ್ಷ್ಮಿ (ಅಂಬಾಬಾಯಿ) ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಸಾಂಪ್ರದಾಯಿಕ ಪದ್ಧತಿಗಳ ಭಾಗವಾಗಿ ಶಕ್ತಿಪೀಠ ಅಂಬಾಬಾಯಿ ದೇವಸ್ಥಾನದಲ್ಲಿ ಫಿರಂಗಿ ವಂದನೆ ಸಲ್ಲಿಸಲಾಗಿದೆ. ನಂತರ ದೇವಸ್ಥಾನದ ಅಂಗಳದಲ್ಲಿ ಘಟಸ್ಥಾಪನೆಯನ್ನು ಸ್ಥಾಪಿಸುವ ಮೂಲಕ ಶರದಿಯಾ ನವರಾತ್ರಿ ಉತ್ಸವವನ್ನು ಪ್ರಾರಂಭಿಸಲಾಯಿತು. ಶರದಿಯಾ ನವರಾತ್ರಿ ಉತ್ಸವದ ಮೊದಲ ದಿನವಾದ್ದರಿಂದ ಅಂಬಾಬಾಯಿಯ ದರ್ಶನ ಪಡೆಯಲು ಭಕ್ತಸಾಗರ ಹರಿದುಬಂದಿದೆ.ದೇವಿಗೆ ಭಕ್ತರು ಅಂಬಾಬಾಯಿ ಸೀರೆ, ತೆಂಗಿನಕಾಯಿ ಸೇರಿದಂತೆ ತಾಯಿಗೆ ಸಂಬಂಧಿಸಿದ ವಸ್ತುಗಳನ್ನು ಅರ್ಪಿಸುತ್ತಾರೆ. ನವರಾತ್ರಿ ಮೊದಲನೆ ದಿನ ಹಿನ್ನೆಲೆ ಬೆಳಗ್ಗೆ 4 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಾಯಿತು. ಮೊದಲು ಸಂಪ್ರದಾಯದಂತೆ ದೇವಿಗೆ ಅಭಿಷೇಕ ಮತ್ತು ಆರತಿ ಮಾಡಲಾಯಿತು. ಫಿರಂಗಿ ವಂದನೆ ಬಳಿಕ ಪಶ್ಚಿಮ ಮಹಾರಾಷ್ಟ್ರ ದೇವಸ್ಥಾನ ಸಮಿತಿಯ ವ್ಯವಸ್ಥಾಪಕ ಮಹಾದೇವ ದಿಂಡೆ ಅವರ ಸಮ್ಮುಖದಲ್ಲಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು ಮತ್ತು ಮೊದಲ ದಿನ ಶ್ರೀ ಕಮಲಾಯಿ ದೇವಿಯ ರೂಪದಲ್ಲಿ ಅಂಬಾಬಾಯಿ ದೇವಿಯ ವಿಶೇಷ ಪೂಜೆ ಜರುಗಿತು. ದೇವಸ್ಥಾನ ಸಮಿತಿಯು ದರ್ಶನ ಸರತಿ ಸಾಲಿನಿಂದ ದೇವಾಲಯದವರೆಗೆ ದರ್ಶನಕ್ಕೆ ಸೌಲಭ್ಯಗಳನ್ನು ಒದಗಿಸಿದೆ. ಈ ವರ್ಷ, ದೇವಾಲಯದ ದೊಡ್ಡ ಮೆಟ್ಟಿಲುಗಳ ಮೇಲೆ ರ‍್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ದರ್ಶನದ ಸರತಿ ಸಾಲುಗಳು ವೇಗವಾಗಿ ಮುಂದಕ್ಕೆ ಸಾಗುತ್ತಿವೆ. ಇದರಿಂದ ಭಕ್ತರಿಗೆ ಅನುಕೂಲವಾಗಿದೆ. ಹಾಗೇ, ಮೊದಲ ಬಾರಿಗೆ AI ತಂತ್ರಜ್ಞಾನವನ್ನು ಬಳಸಿಕೊಂಡು ಜನಸಂದಣಿಯನ್ನು ನಿಯಂತ್ರಿಸಲು ಪ್ರತ್ಯೇಕ ಕೊಠಡಿಯನ್ನು ಸ್ಥಾಪಿಸಲಾಗಿದೆ. ಅಂಬಾಬಾಯಿ ದೇವಾಲಯದ ಆವರಣವು 24 ಗಂಟೆಗಳ ಕಾಲ ಸಿಸಿಟಿವಿ ಕ್ಯಾಮರಾ ಕಣ್ಗಾವಲಿನಲ್ಲಿರುತ್ತದೆ ಮತ್ತು ಜಿಲ್ಲಾ ಪುಣೆ ಪಡೆಯಿಂದ ದೇವಾಲಯದ ಪ್ರದೇಶದಲ್ಲಿ ದೊಡ್ಡ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ವಿವಿಧ ಅವತಾರಗಳಲ್ಲಿ ಬೇಜವಾಡ ಕನಕ ದುರ್ಗಮ್ಮನ ದರ್ಶನ: ಕಣ್ಣುಗಳೆರಡು ಸಾಲದು ಈ ತಾಯಿಯ ಚಿನ್ನದ ವೈಭವ ನೋಡಲು

Category

🗞
News
Transcript
00:00This video is brought to you by the U.S. Department of Health and Human Services.
Be the first to comment
Add your comment

Recommended