Skip to playerSkip to main content
  • 6 months ago
ಚಾಮರಾಜನಗರ : 5 ಹುಲಿಗಳು ಮೃತಪಟ್ಟ ಮಲೆಮಹದೇಶ್ವರ ವನ್ಯಜೀವಿಧಾಮ ಹೂಗ್ಯಂ ವಲಯದಲ್ಲಿ ಗಂಡು ಹುಲಿಯೊಂದು ಓಡಾಡಿದೆ. ಈ ದೃಶ್ಯವನ್ನು ರೈತರು ತಮ್ಮ ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ.ಹನೂರು ತಾಲೂಕಿನ ಕೂಡ್ಲೂರು ಗ್ರಾಮದ ರೈತ ಮುಖಂಡ ವೆಂಕಟೇಶ್ ಹಾಗೂ ಸ್ನೇಹಿತರು ತಮಿಳುನಾಡಿನ ಕಡಂಬೂರು ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯದ ಅರಣ್ಯ ಪ್ರದೇಶದಲ್ಲಿ ಹುಲಿರಾಯ ದರ್ಶನ ನೀಡಿದ್ದಾನೆ. ವೆಂಕಟೇಶ್ ಶನಿವಾರ ಮಧ್ಯಾಹ್ನ 3 ಗಂಟೆಯ ವೇಳೆ ಜಲ್ಲಿ ಪಾಳ್ಯ ಗ್ರಾಮದಿಂದ ಮಾಕನಪಾಳ್ಯ ಮಾರ್ಗವಾಗಿ ಕಡಂಬೂರಿಗೆ ಟ್ರ್ಯಾಕ್ಟರ್ ಮೂಲಕ ತೆರಳುತ್ತಿದ್ದಾಗ ಹುಲಿ ಕಾಣಿಸಿಕೊಂಡಿದೆ. ಇದನ್ನು ಕಂಡ ವೆಂಕಟೇಶ್ ಹಾಗೂ ಸ್ನೇಹಿತರು ಮೊಬೈಲ್ ನಲ್ಲಿ ಅದರ ಚಲನವಲನದ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗಿದೆ.  ಕಳೆದ ಜೂನ್ ತಿಂಗಳಿನಲ್ಲಿ ಹೂಗ್ಯಂ ವಲಯದ ಮೀಣ್ಯಂನಲ್ಲಿ ವಿಷಪ್ರಾಶನದಿಂದಾಗಿ ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳು ಮೃತಪಟ್ಟಿದ್ದವು. ಇದೀಗ ಜಲ್ಲಿಪಾಳ್ಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹುಲಿ ದರ್ಶನ ನೀಡಿದ್ದು, ಪರಿಸರಪ್ರೇಮಿಗಳ ಸಂತಸಕ್ಕೂ ಕಾರಣವಾಗಿದೆ‌. ಈ ಕುರಿತು ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ಪ್ರತಿಕ್ರಿಯೆ ನೀಡಿದ್ದು, '5 ಹುಲಿಗಳು ಮೃತಪಟ್ಟ ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಜೊತೆ ತೆರಳಿದ್ದ ವೇಳೆ ಗಂಡು ಹುಲಿ ಕಾಣಿಸಿಕೊಂಡಿತ್ತು. ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಹೂಗ್ಯಂ ವಲಯ ವ್ಯಾಪ್ತಿಯಲ್ಲಿ ಹುಲಿಗಳು ಸಂಚಾರ ಮಾಡುತ್ತಿವೆ. ಪ್ರತಿಯೊಬ್ಬರು ವನ್ಯ ಪ್ರಾಣಿಯನ್ನು ಸಂರಕ್ಷಣೆ ಮಾಡಬೇಕು' ಎಂದಿದ್ದಾರೆ‌.ಇದನ್ನೂ ಓದಿ :  ಒಂದೂರಲ್ಲಿ ಹುಲಿ ಓಡಾಟ: ಮತ್ತೊಂದು ಊರಲ್ಲಿ ಕತ್ತೆ ಕಿರುಬನ ದರ್ಶನ; ವಿಡಿಯೋ ಸೆರೆ ಹಿಡಿದ ರೈತರು - TIGER AND HYENA FOUND

Category

🗞
News
Transcript
00:00What are you doing?
00:30Oh no, Néstor, no Néstor.
01:00I'm gonna get out of the car, man.
Comments

Recommended