Skip to playerSkip to main content
  • 1 hour ago
ಆನೇಕಲ್: ಸಿನಿಮಾ ಸ್ಟೈಲ್​ನಲ್ಲಿ ಯುವಕನ ಕಿಡ್ನ್ಯಾಪ್ ಯತ್ನಿಸಿ ವಿಫಲವಾದ ಘಟನೆ ಆನೇಕಲ್-ಜಿಗಣಿ ಮುಖ್ಯರಸ್ತೆಯ ಇಂಡ್ಲವಾಡಿ ಕ್ರಾಸ್ ಬಳಿ ನಡೆದಿದೆ. ಮೊಬೈಲ್​ನಲ್ಲಿ ಸೆರೆಯಾಗಿರುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.ವಿಡಿಯೋ ವೈರಲ್​ ಆಗುತ್ತಿದ್ದಂತೆ ಮಾಹಿತಿ ತಿಳಿದ ಪೊಲೀಸರು ಘಟನೆ ಬಗ್ಗೆ ವಿವರ ಕಲೆ ಹಾಕಲು ಸ್ಥಳಕ್ಕೆ ದೌಡಾಯಿಸಿದ್ದಾರೆ.ಮೂರು ಬೈಕ್, ಒಂದು ಕಾರಿನಲ್ಲಿ ಬಂದಿದ್ದ ಸುಮಾರು ಎಂಟು ಜನರ ಗ್ಯಾಂಗ್​ನಿಂದ ಯುವಕನನ್ನು ಹೊಡೆದು ಕಿಡ್ನ್ಯಾಪ್ ಮಾಡಲು ಯತ್ನಿಸಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಸಾರಿ ತಪ್ಪಾಯ್ತು, ಆಪರೇಷನ್ ಆಗಿದೆ. ಬಿಟ್ಟುಬಿಡಿ ಎಂದರೂ ಕೇಳದೆ ಹಲ್ಲೆ ಮಾಡಿದ ಗ್ಯಾಂಗ್​ನ ವರ್ತನೆ ವೈರಲ್ ಆಗಿದೆ.ಯುವಕನಿಗೆ ಹಲ್ಲೆ ನಡೆಸಿ ಕಾರಿನೊಳಗೆ ಹಾಕಿಕೊಳ್ಳಲು ಯತ್ನಿಸಲಾಗಿದ್ದು, ಯುವಕ ಕಾರಿನ ಕಿಟಕಿಯನ್ನು ಬಿಗಿಯಾಗಿ ಹಿಡಿದ ಕಾರಣ ಆತನನ್ನು ಕಾರಿನೊಳಗೆ ನೂಕಲು ಸಾಧ್ಯವಾಗಿಲ್ಲ. ಜನರಿದ್ದ ಸರ್ಕಲ್ ಆದ್ದರಿಂದ, ಸುತ್ತಲೂ ಜನರು ನೋಡುತ್ತಿದ್ದರೂ ಯುವಕನ ಥಳಿಸಿ ಅವಾಚ್ಯ ಪದಗಳಿಂದ ನಿಂದಿಸಿದ ಗ್ಯಾಂಗ್ ವರ್ತನೆ ದೃಶ್ಯಗಳಲ್ಲಿ ದಾಖಲಾಗಿದೆ. ಜನರು ಜಮಾಯಿಸಿ ಪ್ರಶ್ನೆ ಮಾಡುತ್ತಿದ್ದಂತೆ ಯುವಕನನ್ನು ಬಿಟ್ಟು ಕಿಡ್ನಾಪರ್ಸ್​ ಗ್ಯಾಂಗ್​ ಕಾರು ಮತ್ತು ಬೈಕ್​ಗಳಲ್ಲಿ ಪರಾರಿಯಾಗಿದೆ.ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಎಸ್ಪಿ ನಾಗರಾಜ್ ಭೇಟಿ ನೀಡಿ ಕೂಡಲೇ ಎಲ್ಲರನ್ನೂ ಪತ್ತೆ ಹಚ್ಚಿ, ಕಾರು ಬೈಕುಗಳ ನೋಂದಣಿ ನಂಬರ್ ಜಾಡು ಹಿಡಿದು ಬಂಧಿಸಿ ಎಂದು ಆನೇಕಲ್ ಇನ್​ಸ್ಪೆಕ್ಟರ್ ತಿಪ್ಪೇಸ್ವಾಮಿ ಅವರಿಗೆ ಸೂಚಿಸಿದ್ದಾರೆ.ಸದ್ಯಕ್ಕೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.ಇದನ್ನೂ ನೋಡಿ: ತನ್ನ ನೆಚ್ಚಿನ ಎತ್ತಿನ ಕಳೇಬರದೆದುರು ಕುಳಿತು ಕೊನೆಗೊಮ್ಮೆ ಅಕ್ಕರೆ ತೋರಿಸಿದ ಶ್ವಾನ- ವಿಡಿಯೋ

Category

🗞
News
Transcript
00:00I don't want the blue
00:05Bro, bro, leave me
00:08I just told you that
00:18Bro, come on
00:21He's taking a bus
00:23I don't want to take a bus
00:25I don't know how to do this!
01:25I don't know.
01:55It was on your job.
02:25If you are in a car, you are in a car, it's a car and you are in a car.
Comments

Recommended