ವಿಜಯನಗರ: ಜಿಲ್ಲೆಯ ಪೊಲೀಸ್ ಸಿಬ್ಬಂದಿಗೆ ಹೊಸ ಕ್ಯಾಪ್ ಬಂದಿದ್ದು, ಎಸ್ಪಿ ಎಸ್.ಜಾಹ್ನವಿ ವಿತರಿಸಿದರು. ಹೊಸಪೇಟೆಯ ಡಿಎಆರ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ಯಾಪ್ ವಿತರಿಸಲಾಯಿತು. ಸ್ಲೋ ಚಾಟ್ ಕ್ಯಾಪ್ ಬಿಟ್ಟು, ಬ್ಲೂ ಪೀಕ್ ಕ್ಯಾಪನ್ನು ಪೊಲೀಸರು ಧರಿಸಿದರು. ವಿಜಯನಗರ ಜಿಲ್ಲೆಯ 1200 ಸಿಬ್ಬಂದಿಗೆ ಕ್ಯಾಪ್ ವಿತರಣೆ ಮಾಡಲಾಯಿತು. ಕ್ಯಾಪ್ ವಿತರಿಸಿದ ಬಳಿಕ ಮಾತನಾಡಿದ ಎಸ್ಪಿ ಎಸ್.ಜಾಹ್ನವಿ ಪೊಲೀಸರು ವಿನೂತನ ಬ್ಲೂ ಪೀಕ್ ಕ್ಯಾಪ್ ಧರಿಸಿದ ಮೇಲೆ ಕಾರ್ಯವೈಖರಿಯಲ್ಲೂ ಬದಲಾವಣೆ ಆಗಬೇಕು ಎಂದು ಹೇಳಿದರು.ಹೊಸ ಕ್ಯಾಪ್ ಧರಿಸಿ ಎಲ್ಲರಿಗೆ ಹೆಮ್ಮೆ ಎನಿಸುತ್ತಿದೆ. ಅದೇ ಹೆಮ್ಮೆಯಿಂದ ಕರ್ತವ್ಯ ನಿಭಾಯಿಸಿ. ಇಲಾಖೆಯ ಸೂಚನೆ, ನಿರ್ದೇಶನದಂತೆ ಅಪರಾಧ ತಡೆ, ಸಂಚಾರ ಸುವ್ಯವಸ್ಥೆ ಕಾಪಾಡುವುದು, ಕಾನೂನು ಸುವ್ಯವಸ್ಥೆಗೆ ಶ್ರಮ ವಹಿಸಿ ಕೆಲಸ ಮಾಡಬೇಕು. ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ ಕೆಲಸ ಮಾಡಿ, ಮಾಡುವ ಕೆಲಸದಲ್ಲಿ ಆಸಕ್ತಿ ಇರಲಿ ಎಂದರು.ಅತ್ಯಂತ ಶಿಸ್ತು ಹಾಗೂ ಇಲಾಖೆಯ ಘನತೆ ಎತ್ತಿ ಹಿಡಿಯಲು ಹಾಗೂ ಉನ್ನತ ಮಟ್ಟದ ಸೇವೆ ನೀಡುವ ಮೂಲಕ ಜಿಲ್ಲೆಯ ಜನತೆ ಗೌರವದಿಂದ ಜೀವನ ಸಾಗಿಸಲು ಪ್ರೇರಣೆಯಾಗುವಂತಾಗಬೇಕು ಎಂದು ತಿಳಿಸಿದರು.ಎಎಸ್ಪಿ ಜಿ.ಮಂಜುನಾಥ. ಡಿವೈಎಸ್ಪಿ ಡಾ. ಟಿ.ಮಂಜುನಾಥ್ ತಳವಾರ, ಮಲ್ಲೇಶ್ ದೊಡಮನಿ, ಜಿಲ್ಲೆಯ ಇನ್ಸ್‌ಪೆಕ್ಟರ್‌ಗಳು, ಸಿಬ್ಬಂದಿ ಮತ್ತಿತರರಿದ್ದರು.ಇದನ್ನೂ ನೋಡಿ: ಮಹಾರಾಷ್ಟ್ರದ ಅಂಬಾ ಘಾಟ್‌ನ ಕಂದಕಕ್ಕೆ ಬಿದ್ದ ಬಸ್; 18 ಪ್ರಯಾಣಿಕರಿಗೆ ಗಾಯ, ತಪ್ಪಿದ ಸಾವು - ನೋವು
Be the first to comment