ಹಾವೇರಿ: ತನ್ನ ಅಚ್ಚುಮೆಚ್ಚಿನ ಎತ್ತು ಸಾವನ್ನಪ್ಪಿದ್ದಕ್ಕೆ ಸಾಕು ಶ್ವಾನವೊಂದು ಮೂಕರೋಧನೆಪಟ್ಟಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಇಂಥದ್ದೊಂದು ದೃಶ್ಯ ಸೆರೆಯಾಯಿತು. ಶಿಗ್ಗಾಂವ್ ತಾಲೂಕಿನ ಹುಲಿಕಟ್ಟಿ ಗ್ರಾಮದ ಸಿದ್ದಬೀರಪ್ಪ ಗಡ್ಡೆ ಎಂಬವರಿಗೆ ಸೇರಿದ ಎತ್ತು ಅನಾರೋಗ್ಯದಿಂದ ಮೃತಪಟ್ಟಿತ್ತು. ಎತ್ತು ಎಲ್ಲೇ ಹೋದರೂ ಸದಾ ಜತೆಗಿರುತ್ತಿದ್ದ ಶ್ವಾನ ಅದು ಸಾವನ್ನಪ್ಪುತ್ತಿದ್ದಂತೆ ಮರುಗಿದೆ. ಎತ್ತಿನ ಮುಖ ನೆಕ್ಕುತ್ತಾ ಶ್ವಾನ ತನ್ನ ಅಕ್ಕರೆಯನ್ನು ತೋರಿಸುತ್ತಿತ್ತು.ಹೊಲದಲ್ಲಿ ಉಳುಮೆ ಮಾಡಲು ಹೋದಾಗೆಲ್ಲ ಅದರ ಬಳಿಯೇ ಇರುತ್ತಿದ್ದ ಶ್ವಾನ, ಅದು ಸತ್ತ ಮೇಲೆ ಅಂತ್ಯಸಂಸ್ಕಾರ ಮಾಡುವವರೆಗೂ ಜೊತೆಗಿದ್ದು ಅಚ್ಚರಿ ಮೂಡಿಸಿತು. ಶ್ವಾನದ ಪ್ರೇಮ ಕಂಡು ಹುಲಿಕಟ್ಟಿ ಗ್ರಾಮಸ್ಥರು ಮರುಗಿದರು.ಇತ್ತೀಚಿನ ಘಟನೆ: ಹಾವೇರಿಯಲ್ಲಿ 'ರಾಕ್ಷಸ' ಹೆಸರಿನ ಕೊಬ್ಬರಿ ಹೋರಿ ಸಾವನ್ನಪ್ಪಿತ್ತು. ಸುಮಾರು 18 ವರ್ಷ ವಯಸ್ಸಿನ ಹೋರಿ ಹಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿತ್ತು. ಕೆರಿಮತ್ತಿಹಳ್ಳಿಯ ಸಿದ್ದಲಿಂಗಪ್ಪ ವಾಲಿ ಎಂಬ ರೈತ ಈ ಹೋರಿಯನ್ನು ತಮಿಳುನಾಡಿನಿಂದ ಹನ್ನೊಂದು ವರ್ಷಗಳ ಹಿಂದೆ ಖರೀದಿಸಿ ತಂದಿದ್ದರು. ಈ ಹೋರಿಯ ಅಗಲುವಿಕೆಗೆ ಅಭಿಮಾನಿಗಳು ಬೇಸರಪಟ್ಟಿದ್ದರು.ಇದನ್ನೂ ಓದಿ: ಅಖಾಡದಲ್ಲಿ ಧೂಳೆಬ್ಬಿಸುತ್ತಿದ್ದ ರಾಕ್ಷಸ - 220 ಇನ್ನಿಲ್ಲ: ಕಣ್ಣೀರಿಟ್ಟ ಕುಟುಂಬ, ಅಭಿಮಾನಿಗಳಿಂದ ಕಂಬನಿ
Comments