ಹಾವೇರಿ: ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಅವರು ಸೋಮವಾರ ಸಂಜೆ ರಾಣೆಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯಕ್ಕೆ ಸಫಾರಿಗೆ ತೆರಳಿದ್ದು, ಈ ವೇಳೆ ಚಿರತೆ ಕಂಡು ಬಂದಿದೆ. ಚಿರತೆ ದೃಶ್ಯವನ್ನು ಶಾಸಕ ಕೋಳಿವಾಡ ಅವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.ಶಾಸಕ ಪ್ರಕಾಶ್ ಕೋಳಿವಾಡ ಜೊತೆ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎನ್. ರಾಮಪ್ಪ ಹಾಗೂ ಇತರರು ಸೇರಿ ಸಫಾರಿಗೆ ಹೋಗಿದ್ದರು. ಈ ವೇಳೆ ಅಡಗಿ ಕುಳಿತಿದ್ದ ಚಿರತೆ ದಿಢೀರ್ ಪ್ರತ್ಯಕ್ಷವಾಗಿದೆ. ಚಿರತೆ ಕಾಣಿಸಿಕೊಂಡಿದ್ದನ್ನು ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಸಫಾರಿ ವಾಹನದಲ್ಲಿ ಹೋಗುತ್ತಿದ್ದಾಗ ಮೊದಲಿಗೆ ಕೃಷ್ಣಮೃಗಗಳ ಹಿಂಡು ಜಿಗಿಯುವ ದೃಶ್ಯ ಕಂಡು ಬಂದಿದೆ. ಸಫಾರಿ ವಾಹನವನ್ನು ಕೆಲಕಾಲ ನಿಲ್ಲಿಸಿ, ಪ್ರಕಾಶ್ ಕೋಳಿವಾಡ ಅವರು ತಮ್ಮ ಮೊಬೈಲ್ನಲ್ಲಿ ಕೃಷ್ಣಮೃಗಗಳು ಜಿಗಿಯುವ ದೃಶ್ಯವನ್ನು ಸೆರೆಹಿಡಿದಿದ್ದಾರೆ. ನಯನ ಮನೋಹರ ದೃಶ್ಯ ನೋಡಿದ ಪ್ರವಾಸಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಚಿರತೆ ಮರಿ ಹಾಕಿದ್ದು, ಮರಿಗಳ ಹತ್ತಿರ ಬಂದಿತ್ತು. ಸಫಾರಿ ವಾಹನ ಕಾಣುತ್ತಿದ್ದಂತೆ ಅಭಯಾರಣ್ಯದ ಅಂಚಿನಲ್ಲಿರುವ ಕಬ್ಬಿನ ಹೊಲಕ್ಕೆ ಚಿರತೆ ತೆರಳಿತು.ಇದನ್ನೂ ನೋಡಿ: ಆನೇಕಲ್: ಕಾಡು ಕೋಣದ ಆಟಾಟೋಪ, ಜನರಲ್ಲಿ ಆತಂಕ
Be the first to comment