ಮೈಸೂರು: ಇಲ್ಲಿನ ಪ್ರವಾಸಿತಾಣಗಳಲ್ಲಿ ಪೆದ್ದಿ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇರುವ ತೆಲುಗು ಚಿತ್ರರಂಗದ ಖ್ಯಾತ ನಟ ರಾಮಚರಣ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾನುವಾರ ಭೇಟಿಯಾದರು. ರಾಮಕೃಷ್ಣ ನಗರದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಆಗಮಿಸಿದ ನಟ ರಾಮಚರಣ್ ಅವರು ಸಿಎಂ ಅವರನ್ನು ಭೇಟಿಯಾಗಿ, ಶಾಲು ಹೊದಿಸಿ ಗೌರವಿಸಿದರು. ಈ ವೇಳೆ ಮೈಸೂರಿನಲ್ಲಿ ನಡೆಯುತ್ತಿರುವ ಪೆದ್ದಿ ಚಿತ್ರೀಕರಣದ ಬಗ್ಗೆ ಚರ್ಚಿಸಿದರು. ಸಚಿವರಾದ ಸಂತೋಷ್ ಲಾಡ್, ಎಂಎಲ್‌ಸಿ ಡಾ. ಯತೀಂದ್ರ ಸಿದ್ದರಾಮಯ್ಯ, ಶಾಸಕ ಅನಿಲ್ ಚಿಕ್ಕಮಾದು ಹಾಜರಿದ್ದರು.ನಟ ರಾಮ್ ಚರಣ್ - ಬುಚ್ಚಿ ಬಾಬು ಸನಾ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ನಿರ್ಮಾಪಕರು ಈಗಾಗಲೇ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಗ್ಲಿಂಪ್ಸ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ.ಇತ್ತೀಚೆಗೆ ಚಿತ್ರದ ಒಟಿಟಿ ಒಪ್ಪಂದಗಳೂ ಸಹ ಮುಕ್ತಾಯಗೊಂಡಿದ್ದು, ಒಟಿಟಿ ಹಕ್ಕುಗಳು ಸುಮಾರು 100 ಕೋಟಿ ರೂ.ಗೆ ಮಾರಾಟವಾಗಿವೆ ಎಂದು ಚಲನಚಿತ್ರೋದ್ಯಮ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಆದ್ರೆ, ಈ ವಿಷಯದ ಬಗ್ಗೆ ಅಧಿಕೃತ ಘೋಷಣೆ ಚಿತ್ರತಂಡದಿಂದ ಇನ್ನೂ ಹೊರಬಿದ್ದಿಲ್ಲ.ಇದನ್ನೂ ಓದಿ : ಮೈಸೂರಿನಲ್ಲಿ 1,000 ನೃತ್ಯಗಾರರೊಂದಿಗೆ ಟಾಲಿವುಡ್ ಸ್ಟಾರ್ ರಾಮ್ ಚರಣ್ ಜಬರ್ದಸ್ತ್ ಡ್ಯಾನ್ಸ್ - PEDDI
Be the first to comment