ಮೈಸೂರು: ಬೋನಿನಲ್ಲಿ ಕರು ಇದ್ದರೂ, ಅದನ್ನು ತಿನ್ನದೇ ಚಿರತೆ ತಾಯಿಯಂತೆ ಮಮಕಾರ ತೋರಿರುವ ತೀರಾ ಅಪರೂಪದ ಘಟನೆ ನಡೆದಿದೆ. ಹೆಚ್.ಡಿ.ಕೋಟೆ ಪಟ್ಟಣದ ವಾಸಿ ಹೆತ್ತನಾಯ್ಕರ ಜಮೀನಿನಲ್ಲಿರಿಸಿದ್ದ ಬೋನಿನಲ್ಲಿ, ಸೋಮವಾರ ರಾತ್ರಿ ಆಹಾರ ಅರಸಿ ಬಂದ ಎರಡು ವರ್ಷದ ಗಂಡು ಚಿರತೆ ಬೋನಿನಲ್ಲಿ ಬಂಧಿಯಾಗಿದೆ.ಹುಲಿಯಾಗಿ ಇಟ್ಟಿದ್ದ ಬೋನಿನಲ್ಲಿ ಚಿರತೆ: ಉಪಟಳ ನೀಡುತ್ತಿದ್ದ ಹುಲಿ ಸೆರೆಗೆ ಇರಿಸಿದ್ದ ಬೋನಿನಲ್ಲಿ ಬಂಧಿಯಾದ ಗಂಡು ಚಿರತೆ. ಬೋನಿನಲ್ಲಿ ಇರಿಸಿದ್ದ ಕರು ಭಕ್ಷಿಸಲು ಬಂದು ಚಿರತೆ ಬಂಧಿಯಾಗಿದೆ.ಒಂದೇ ಬೋನಿನಲ್ಲಿ ಯಾವುದೇ ಅಡೆತಡೆ ಇಲ್ಲದಂತಿದ್ದರೂ ಕರುವಿಗೆ ಯಾವುದೇ ಅಪಾಯ ಮಾಡದೇ ಚಿರತೆ, ತಾಯಿ ಮಮಕಾರ ತೋರಿಸಿದೆ. ಸಾಕು ಪ್ರಾಣಿಗಳ ಮೇಲೆ ಹುಲಿ ದಾಳಿ ನಡೆಸುತ್ತಿದ್ದ ಹಿನ್ನೆಲೆ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿರುವ ಚಿರತೆಯನ್ನು ನೋಡಲು ಜನಸಾಗರವೇ ಬಂದಿತ್ತು.ಇಂದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಸೆರೆ ಸಿಕ್ಕ ಚಿರತೆಯನ್ನು ಮತ್ತೊಂದು ಬೋನಿಗೆ ಸ್ಥಳಾಂತರಿಸಿ ಕೊಂಡೊಯ್ದಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಚಿರತೆ ಆರೋಗ್ಯ ಆಧರಿಸಿ ಅರಣ್ಯಕ್ಕೆ ಬಿಡುವ ಚಿಂತನೆ ಮಾಡಲಾಗಿದೆ ಎಂದು ಅಂತರಸಂತೆ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಚಿರತೆಯ ಡಿಫರೆಂಟ್ ಪೋಸ್ ನೋಡಿ: ಯಾವ ಮಾಡೆಲ್ಗೂ ಕಮ್ಮಿ ಇಲ್ಲ ರೀ!
Be the first to comment