ಚಿಕ್ಕಮಗಳೂರು: ಜಿಲ್ಲೆಯ ಮುತ್ತೋಡಿ ಭದ್ರಾ ಆಭಯಾರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ಹಿಂಡೊಂದು ಏಕಕಾಲಕ್ಕೆ ರಸ್ತೆ ದಾಟಿದ್ದು, ಈ ಅಪರೂಪದ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ಸುಮಾರು 25ಕ್ಕೂ ಹೆಚ್ಚು ಕಾಡಾನೆಗಳು ಮುತ್ತೋಡಿ ರಸ್ತೆಯನ್ನು ದಾಟುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಗಜಪಡೆ ರಸ್ತೆ ದಾಟುತ್ತಿರುವುದನ್ನು ಕಂಡ ವಾಹನ ಸವಾರರು, ಅಪರೂಪದ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ.ಇತ್ತೀಚೆಗೆ ಅಭಯಾರಣ್ಯದಲ್ಲಿ ಆನೆಗಳ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ, ಕಾಡಂಚಿನ ಗ್ರಾಮಗಳತ್ತ ಗಜಪಡೆ ದಾಂಗುಡಿ ಇಡುತ್ತಿದೆ. ಒಮ್ಮೆಲೇ ಇಷ್ಟೊಂದು ಆನೆಗಳನ್ನು ಕಂಡು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ನಿರ್ಮಾಣವಾಗಿದೆ. ತೋಟ, ಗದ್ದೆ ಹಾಗೂ ಮನೆಗಳ ಮೇಲೆ ಕಾಡಾನೆಗಳ ಹಿಂಡು ದಾಳಿ ಮಾಡುವ ಬಗ್ಗೆ ಜನರು ಭಯಭೀತರಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ. ಪ್ರತ್ಯೇಕ ಸುದ್ದಿ: ಬರೋಬ್ಬರಿ 40ಕ್ಕೂ ಹೆಚ್ಚು ಕಾಡಾನೆಗಳನ್ನು ಕಂಡು ರೈತರು ಬೆಚ್ಚಿಬಿದ್ದ ಘಟನೆ ಕರ್ನಾಟಕ - ತಮಿಳುನಾಡು ಗಡಿ ಪ್ರದೇಶವಾದ ಅರಳವಾಡಿಯಲ್ಲಿ ಇತ್ತೀಚೆಗೆ ನಡೆದಿತ್ತು. ಗಡಿಯಲ್ಲಿರುವ ಅರಳವಾಡಿ ಗ್ರಾಮದ ಆಸುಪಾಸು 40ಕ್ಕೂ ಹೆಚ್ಚು ಆನೆಗಳ ಹಿಂಡು ಕೃಷಿ ಭೂಮಿಯಲ್ಲಿ ಓಡಾಡಿದ್ದು ರೈತರು ಆನೆಗಳನ್ನು ಕಂಡು ದಿಗಿಲುಗೊಂಡಿದ್ದರು. ಇದಕ್ಕೂ ಮುನ್ನ ಗಡಿಗ್ರಾಮದ ಜಮೀನುಗಳಲ್ಲಿ 8-10 ಆನೆಗಳು ಓಡಾಡಿದ್ದವು. ಆದರೆ, ದಿಢೀರ್ 40ಕ್ಕೂ ಅಧಿಕ ಆನೆಗಳು ಬೆಳೆನಾಶ ಮಾಡಿ ಹೋಗಿದ್ದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು.ಇದನ್ನೂ ಓದಿ: ಮೈಸೂರು: 4 ಹುಲಿ ಮರಿಗಳ ಸಾವಿಗೆ ಕಾರಣವೇನು? ಅರಣ್ಯ ಇಲಾಖೆ ಹೇಳಿದ್ದೇನು?
Be the first to comment