Skip to playerSkip to main content
  • 3 months ago
ಮೈಸೂರು: ಚಾಮುಂಡಿ ಬೆಟ್ಟದ ದೇವಿಕೆರೆ ರಸ್ತೆಯಲ್ಲಿರುವ ತಡೆಗೋಡೆ ಮೇಲೆ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಚಾಮುಂಡಿ ಬೆಟ್ಟದ ದೇವಿ ಕೆರೆಯ ರಸ್ತೆಯಲ್ಲಿರುವ ತಡೆಗೋಡೆ ಮೇಲೆ ಕುಳಿತ ಚಿರತೆ, ಸ್ಥಳೀಯ ನಿವಾಸಿಗಳಿಗೆ ಸರಿಯಾಗಿ ಫೋಸ್​ ಕೊಟ್ಟಿದೆ. ಚಿರತೆಯ ವಿಡಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಹೌದು.., ಸ್ಥಳೀಯ ನಿವಾಸಿಯೊಬ್ಬರು ತಮ್ಮ ಕೆಲಸ ಮುಗಿಸಿಕೊಂಡು, ವಾಪಸ್ ಚಾಮುಂಡಿ ಬೆಟ್ಟಕ್ಕೆ ತೆರಳುವಾಗ ಶುಕ್ರವಾರ ರಾತ್ರಿ 11ರ ಸಮಯದಲ್ಲಿ ಚಿರತೆ ಬೆಟ್ಟದ ದೇವಿಕೆರೆ ರಸ್ತೆಯಲ್ಲಿರುವ ತಡೆಗೋಡೆ ಕಟ್ಟೆ ಮೇಲೆ ಆರಾಮಾಗಿ ಕುಳಿತಿರುವುದನ್ನು ಕಂಡಿದ್ದಾರೆ. ತಕ್ಷಣ ದೃಶ್ಯವನ್ನು ಜೀಪ್​ನಲ್ಲಿದ್ದ ಸ್ಥಳೀಯರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.ಸುಮಾರು 15 ನಿಮಿಷ ಅಲ್ಲೇ ಇದ್ದ ಚಿರತೆ ವಿವಿಧ ಪೋಸ್​ ಕೊಟ್ಟಿದೆ. ಬಳಿಕ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶಕ್ಕೆ ತೆರಳಿದೆ.
ಕೆಲ ದಿನಗಳ ಹಿಂದಷ್ಟೇ, ಚಾಮುಂಡಿ ಬೆಟ್ಟದ ಮನೆಗಳ ಸಮೀಪವೇ ಚಿರತೆಯೊಂದು ನಾಯಿ ಬೇಟೆಯಾಡಲು ಯತ್ನಿಸಿ, ನಾಯಿಯ ಬಾಯಿಯನ್ನು ಗಾಯಗೊಳಿಸಿ ತೆರಳಿತ್ತು.ಮಾನವ-ಪ್ರಾಣಿ ಸಂಘರ್ಷ ಹೆಚ್ಚುತ್ತಲೇ ಇದೆ. ಅರಣ್ಯ ನಾಶದಿಂದ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬಂದು ಮನುಷ್ಯರು ಅಡ್ಡಾಡದಂತಾಗಿದೆ. ಹೀಗಾಗಿ ಆದಷ್ಟು ಬೇಗ ಸರ್ಕಾರಗಳು ಪರಿಸರ ಮತ್ತು ವನ್ಯಜೀವಿ ಸಮತೋಲನವನ್ನು ಪುನಃಸ್ಥಾಪಿಸುವತ್ತ ಹೆಜ್ಜೆ ಇಡಬೇಕಿದೆ.         ಇದನ್ನೂ ಓದಿ: ಚಿಕ್ಕಮಗಳೂರು: ಬೋನಿಗೆ ಬಿದ್ದ ಚಿರತೆ; ಜನರ ನಿಟ್ಟುಸಿರು

Category

🗞
News
Transcript
00:00Transcribed by ESO, translated by —
00:30Transcribed by —
01:00Transcribed by —
01:30Transcribed by —
02:00Transcribed by —
02:30Transcribed by —
Be the first to comment
Add your comment

Recommended