Skip to playerSkip to main content
  • 2 months ago
ದಾವಣಗೆರೆ: ವೇಗವಾಗಿ ಬಂದ ಕಾರು ಆಟೋಗೆ ಡಿಕ್ಕಿ ಹೊಡೆದು, ಆಟೋದಲ್ಲಿದ್ದ ದಂಪತಿ ಹಾಗೂ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಾವಣಗೆರೆಯ ಪಿ.ಬಿ.ರಸ್ತೆಯಲ್ಲಿ ನಡೆದಿದೆ. ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ನವೆಂಬರ್​​​​​​​ 8ರ ರಾತ್ರಿ ದಾವಣಗೆರೆಯ ಪಿ.ಬಿ.ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಪಲ್ಟಿಯಾಗಿದೆ. ಆಟೋದಲ್ಲಿದ್ದ ಮಗು ಮತ್ತೊಂದು ಬದಿಯ ರಸ್ತೆಗೆ ಹಾರಿ ಬಿದ್ದಿದೆ. ಕಾರು ಹಾಗೂ ಆಟೋ ಚಾಲಕರಿಬ್ಬರೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ದಾವಣಗೆರೆ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೆಂಬರ್​​​​​​​ 8ರ ರಾತ್ರಿ ದಾವಣಗೆರೆಯ ಪಿ.ಬಿ.ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಪಲ್ಟಿಯಾಗಿದೆ. ಆಟೋದಲ್ಲಿದ್ದ ಮಗು ಮತ್ತೊಂದು ಬದಿಯ ರಸ್ತೆಗೆ ಹಾರಿ ಬಿದ್ದಿದೆ.ಹಾಸನದಲ್ಲಿ ಗೂಡಂಗಡಿಗೆ ನುಗ್ಗಿದ ಕಾರು: ಹಳೇ ರಾಷ್ಟ್ರೀಯ ಹೆದ್ದಾರಿ 75ರ ಬಾಳೆಗದ್ದೆ ಬಡಾವಣೆಯಲ್ಲಿರುವ ಕುಬೇರ ಹೋಟೆಲ್​ ಸಮೀಪ ತಿರುವು ಪಡೆಯುತ್ತಿದ್ದ ಕಾರಿಗೆ KSRTC ಬಸ್ ಡಿಕ್ಕಿ ಹೊಡೆದು, ಕಾರು ರಸ್ತೆ ಬದಿಯ ತರಕಾರಿ ಅಂಗಡಿಗೆ ನುಗ್ಗಿದೆ. ಈ ಘಟನೆ ನಿನ್ನೆ ನಡೆದಿದೆ.

Category

🗞
News
Transcript
00:00Transcription by CastingWords
00:30Transcription by CastingWords
01:00Transcription by CastingWords
01:30Transcription by CastingWords
Comments

Recommended