ಧನ್ಬಾದ್(ಜಾರ್ಖಂಡ್): ಬದಲಾಗುತ್ತಿರುವ ಕಾಲದಲ್ಲಿ ಕೆಲವು ವಿಷಯಗಳು ಇನ್ನೂ ಸಮಾಜದಲ್ಲಿ ಕುಷ್ಟರೋಗದಂತೆಯೇ ಅಂಟಿಕೊಂಡಿವೆ. ಅವುಗಳಲ್ಲಿ ಒಂದು ಮುಟ್ಟು. ಇದು ಮಹಿಳೆಯರ ದೇಹದಲ್ಲಾಗುವ ಸಹಜ ಸಾಮಾನ್ಯ ಪ್ರಕ್ರಿಯೆಯಾಗಿದ್ದರೂ, ಇಂದಿಗೂ ಇದರ ಬಗ್ಗೆ ಮೌನ, ಹಿಂಜರಿಕೆ, ತಪ್ಪು ನಂಬಿಕೆಗಳು ಜನಮಾನಸದಲ್ಲಿ ಬೇರೂರಿವೆ.ಈ ಕುರಿತು ಅರಿವು ಮೂಡಿಸಲಾಗುತ್ತಿದೆ. ಹುಡುಗಿಯರು ಬಗ್ಗೆ ಮೌನ ಮುರಿದು, ಮುಕ್ತವಾಗಿ ಮಾತನಾಡಲು ಆರಂಭಿಸಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಗುರುವಾರ ಜಾರ್ಖಂಡ್‌ನ ಧನ್ಬಾದ್ನಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿನಿಯರೆಲ್ಲ ಸೇರಿ ಪಿರಿಯಡ್ ಫೆಸ್ಟ್ ಆಚರಿಸಿದರು. ಜೊತೆಗೆ, ಪ್ಯಾಡ್ ರ‍್ಯಾಲಿಯನ್ನೂ ನಡೆಸಿದರು.ಹಿಂದೆ ಜನರು ಮುಟ್ಟಿನಂತಹ ವಿಷಯಗಳ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದರು. ಆದರೆ ಈಗ 'ಮುಟ್ಟಿನ ವಿಷಯ ನಾಚಿಕೆಯ ವಿಷಯವಲ್ಲ, ಹೆಮ್ಮೆಯ ವಿಷಯ' ಎಂಬ ಘೋಷಣೆಗಳನ್ನು ಧನ್ಬಾದ್ ನಗರದ ಬೀದಿ ಬೀದಿಗಳಲ್ಲಿ ಕೂಗುತ್ತಾ ಡ್ರಮ್‌ಗಳನ್ನು ಬಾರಿಸುತ್ತಾ ಬಹಿರಂಗವಾಗಿ ಮುಟ್ಟನ್ನು ಸಂಭ್ರಮಿಸಿದ್ದಾರೆ. ಕೈಯಲ್ಲಿ ಫಲಕಗಳನ್ನು ಹಿಡಿದುಕೊಂಡು "ಮುಟ್ಟು ನಾಚಿಕೆಯ ವಿಷಯವಲ್ಲ, ಅದು ಸ್ವಾಭಿಮಾನ ಮತ್ತು ಆರೋಗ್ಯ, ಮತ್ತು ಶಿಕ್ಷಣ ಎಲ್ಲರ ಹಕ್ಕು" ಎಂಬ ಘೋಷಣೆಗಳನ್ನು ಕೂಗಿದರು. ನಗರದ ಮಧ್ಯಭಾಗದಿಂದ ನ್ಯೂ ಟೌನ್ ಹಾಲ್‌ವರೆಗೆ ನಡೆದ ಈ ಮೆರವಣಿಗೆಯಲ್ಲಿ ಜಿಲ್ಲೆಯ ಸುಮಾರು 16 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಮೂಲಕ ಕಲ್ಲಿದ್ದಲು ನಗರಿ ಧನ್ಬಾದ್ ಒಂದು ವಿಶಿಷ್ಟ ಉಪಕ್ರಮಕ್ಕೆ ಸಾಕ್ಷಿಯಾಯಿತು. ಋತುಚಕ್ರದ ಬಗ್ಗೆ ಸಮಾಜದಲ್ಲಿ ಹರಡಿರುವ ಹಿಂಜರಿಕೆ ಮತ್ತು ತಪ್ಪು ಕಲ್ಪನೆಗಳನ್ನು ಮುರಿಯಲು ವಿದ್ಯಾರ್ಥಿಗಳು ಬೀದಿಗಳಲ್ಲಿ ರ‍್ಯಾಲಿ ನಡೆಸಿದರು. ಮುಟ್ಟು ಒಂದು ರೋಗ ಅಥವಾ ಸಾಂಕ್ರಾಮಿಕವಲ್ಲ, ಅದೊಂದು ಸಾಮಾನ್ಯ ಪ್ರಕ್ರಿಯೆ ಎಂದು ಜನರಿಗೆ ಅರ್ಥಮಾಡಿಸುವ ಉದ್ದೇಶದೊಂದಿಗೆ ಸಾಂಚಿ ಸಹೇಲಿ ಮತ್ತು ಗೈಲ್ ಧನ್ಬಾದ್ ಸಹಯೋಗದೊಂದಿಗೆ ಪಿರಿಯಡ್ ಫೆಸ್ಟ್ ಮತ್ತು ಪ್ಯಾಡ್ ರ‍್ಯಾಲಿ ಆಯೋಜಿಸಲಾಗಿತ್ತು. ಗೇಲ್ ಗ್ಯಾಸ್ ಲಿಮಿಟೆಡ್ ಮತ್ತು ಸಚ್ಚಿ ಸಹೇಲಿಯ ಸಿಎಸ್‌ಆರ್ ಉಪಕ್ರಮವಾದ ಪ್ರಾಜೆಕ್ಟ್ ನವ್ ಚೆತ್ನಾ ಅಡಿಯಲ್ಲಿ ಧನ್ಬಾದ್‌ನ 16 ಸರ್ಕಾರಿ ಶಾಲೆಗಳಲ್ಲಿ ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯ ಜಾಗೃತಿ ಕಾರ್ಯಕ್ರಮವನ್ನು ಈಗಾಗಲೇ ನಡೆಸಲಾಗುತ್ತಿದೆ. ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹುಡುಗಿಯರು ಮಾತ್ರವಲ್ಲದೆ ಹುಡುಗರಿಗೂ ಇಂತಹ ಸೂಕ್ಷ್ಮ ವಿಷಯದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.ಇದನ್ನೂ ಓದಿ: ತಿಂಗಳಲ್ಲಿ 2 ಬಾರಿ ಪಿರಿಯಡ್ಸ್ ಆಗುತ್ತಿದೆಯೇ? ಇದಕ್ಕೆ ಕಾರಣಗಳಿವು! ಇಂಥ ಸಮಸ್ಯೆಯ ನಿರ್ಲಕ್ಷ್ಯ ಬೇಡ - Irregular Periods
Be the first to comment