Skip to playerSkip to main content
  • 10 hours ago
ತುಮಕೂರು: ತಾಲೂಕಿನ ತಿಮ್ಮಸಂದ್ರ ಹೊರವಲಯದಲ್ಲಿ ಗುರುವಾರ ಚಿರತೆಯೊಂದು ತೆಂಗಿನ ಮರ ಏರಿ ಕುಳಿತು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿರತೆ ಸೆರೆ ಹಿಡಿಯಲು ಹರಸಾಹಸಪಟ್ಟರು. ಕೊನೆಗೆ ಚಿರತೆ ಮರ ಇಳಿದು ಅಧಿಕಾರಿಗಳಿಗೆ ಸಿಗದಂತೆ ಓಡಿ ಹೋಗಿದೆ. ಚಿರತೆ ಕಾಣಿಸಿಕೊಂಡ ಜಾಗ ತುಮಕೂರು ವಿಶ್ವವಿದ್ಯಾಲಯದ ಜ್ಞಾನ ಸಿರಿ ಕ್ಯಾಂಪಸ್​ಗೆ ಹೊಂದಿಕೊಂಡಂತೆ ಇದ್ದು, ಈ ಘಟನೆ ವಿದ್ಯಾರ್ಥಿಗಳಲ್ಲಿ ಭಯ ಉಂಟುಮಾಡಿದೆ. ತಿಮ್ಮಸಂದ್ರದ ಮನೆಯ ಬಳಿ ಚಿರತೆ ಕೋಳಿಯನ್ನು ಹಿಡಿದಿದ್ದು, ನಾಯಿಗಳು ಬೊಗಳಿದ ಸದ್ದಿಗೆ ಮರವೇರಿ ಕುಳಿತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಮುಂದೆ ಚಿರತೆ ಮರದಿಂದ ಇಳಿದು, ತಪ್ಪಿಸಿಕೊಂಡು ಪರಾರಿಯಾಗಿದೆ.ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯುತ್ತೇವೆ ಎಂದು ಮರದಿಂದ ಇಳಿಸಿ ಓಡಿಸಿದ್ದಾರೆ. ಅಲ್ಲಿ ಒಂಟಿ ಮನೆಗಳಿವೆ, ಚಿಕ್ಕ ಮಕ್ಕಳು ಓಡಾಡುತ್ತಿರುತ್ತಾರೆ. ಏನಾದರೂ ಅನಾಹುತ ಸಂಭವಿಸಿದರೆ ಅರಣ್ಯ ಇಲಾಖೆ ಅಧಿಕಾರಿಗಳೇ ಜವಾಬ್ದಾರಿ ಎಂದು ತಿಮ್ಮಸಂದ್ರ ಗ್ರಾಮಸ್ಥರು ದೂರಿದ್ದಾರೆ.ಇದನ್ನೂ ಓದಿ: ಹಾಡಹಗಲೇ ಬೇಟೆಗಿಳಿದು ಬೋನಿಗೆ ಬಿದ್ದ ಹುಲಿ: ವ್ಯಾಘ್ರನ ಉಪಟಳದಿಂದ ರೈತರು ನಿರಾಳ

Category

🗞
News
Transcript
00:00Thank you for listening.

Recommended