ನೈನಿತಾಲ್(ಉತ್ತರಾಖಂಡ): ಇಲ್ಲಿನ ರಾಮ್ನಗರ ಟೆರೈ ಪಶ್ಚಿಮ ಅರಣ್ಯ ವಿಭಾಗದ ಹೆಂಪುರ್ ಡಿಪೋ ಪ್ರದೇಶದಲ್ಲಿ ಸುಮಾರು 18 ಅಡಿ ಉದ್ದದ ಮತ್ತು 1 ಕ್ವಿಂಟಾಲ್ 75 ಕೆ.ಜಿ ತೂಕದ ದೈತ್ಯ ಹೆಬ್ಬಾವು ಪ್ರತ್ಯಕ್ಷವಾಗಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಭಾರೀ ಗಾತ್ರದ ಹೆಬ್ಬಾವನ್ನು ಕಂಡ ಗ್ರಾಮಸ್ಥರು ಹೌಹಾರಿದ್ದಾರೆ. ನಂತರ ಟೆರೈ ಪಶ್ಚಿಮ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ, ಉರಗ ತಜ್ಞ ತಾಲಿಬ್ ಹುಸೇನ್ ಜೊತೆ ಸ್ಥಳಕ್ಕೆ ಧಾವಿಸಿ ಬೃಹತ್ ಗ್ರಾತ್ರದ ಹೆಬ್ಬಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಉರಗ ತಜ್ಞ ತಾಲಿಬ್ ಹುಸೇನ್ ಮಾತನಾಡಿ, "ಹೆಬ್ಬಾವು ಸುಮಾರು 1 ಕ್ವಿಂಟಾಲ್ 75 ಕೆ.ಜಿ ತೂಕವಿದ್ದು, 18 ಅಡಿ ಉದ್ದವಿತ್ತು. ಬೃಹತ್ ಗಾತ್ರದ ಹೆಬ್ಬಾವುಗಳು ತುಂಬಾ ಅಪರೂಪ" ಎಂದು ಹೇಳಿದರು.ಸೆರೆ ಹಿಡಿದ ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. ಯಾವುದೇ ವನ್ಯಜೀವಿಗಳನ್ನು ಕಂಡರೆ ತಕ್ಷಣ ಅರಣ್ಯ ಇಲಾಖೆಗೆ ತಿಳಿಸುವಂತೆ ಅಧಿಕಾರಿಗಳು ಗ್ರಾಮಸ್ಥರಿಗೆ ಮನವಿ ಮಾಡಿದರು.ರಾಕ್ ಪೈಥಾನ್ ಪ್ರಭೇದ: ಈ ಹೆಬ್ಬಾವು ಸಾಮಾನ್ಯವಾಗಿ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ಇದು ಇಂಡಿಯನ್ ರಾಕ್ ಪೈಥಾನ್ ಪ್ರಭೇದಕ್ಕೆ ಸೇರಿದೆ ಮತ್ತು ಪರಿಸರ ಸಮತೋಲನದಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.ಹೆಬ್ಬಾವನ್ನು ಆದಷ್ಟು ಬೇಗ ಸೆರೆಹಿಡಿದು, ಗ್ರಾಮಸ್ಥರ ಆತಂಕ ದೂರ ಮಾಡಿದ ಅರಣ್ಯ ಇಲಾಖೆಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.ಇವುಗಳನ್ನೂ ಓದಿ: ಮೈಸೂರು: ನಾಗರ ಹಾವನ್ನು ಮನೆಯೊಳಗೆ ಬರಲು ಬಿಡದ ಸಾಕುನಾಯಿ- ವಿಡಿಯೋ ನೋಡಿಮಂಡ್ಯ: ಸಾಕು ಪ್ರಾಣಿಗಳ ತಿಂದು ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Be the first to comment