Skip to playerSkip to main content
  • 4 weeks ago
ಮೈಸೂರು: ಇಂದು ಚಾಮುಂಡಿ ಬೆಟ್ಟಕ್ಕೆ ನಟ ಕಿಚ್ಚ ಸುದೀಪ್ ದಂಪತಿ ಆಗಮಿಸಿ ನಾಡ ಅಧಿದೇವತೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.   ಬೆಟ್ಟದ ಮುಂಭಾಗದಲ್ಲಿ ನಟ ಸುದೀಪ್ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಅಭಿಮಾನಿಗಳು ಜೈಕಾರ ಹಾಕಿದರು. ಕಿಚ್ಚನ ಹೊಸ ಹೇರ್ ಸ್ಟೈಲ್ ಹಾಗೂ ಹೊಸ ಲುಕ್​ನಲ್ಲಿ ಅವರನ್ನು ಕಂಡ ಅಭಿಮಾನಿಗಳು ತಮ್ಮ ಮೊಬೈಲ್​ನಲ್ಲಿ ಫೋಟೋ ತೆಗೆಯಲು ಮುಂದಾದರು. ಪತ್ನಿ ಪ್ರಿಯಾ ಜತೆ ನಟ ಸುದೀಪ್ ಆಗಮಿಸಿದ್ದು, ಅವರೊಂದಿಗೆ ಕನ್ನಡ ಬಿಗ್​ಬಾಸ್​ನ ವಿನಯ್ ಗೌಡ ಹಾಗೂ ಇತರರು ಭೇಟಿ ಕೊಟ್ಟಿದ್ದು, ಅವರೂ ಸಹ ತಾಯಿಯ ದರ್ಶನ ಪಡೆದರು.ನಿರ್ಮಾಪಕ ಸಂದೇಶ್ ನಾಗರಾಜ್ ಹುಟ್ಟುಹಬ್ಬ: ಇಂದು ಚಿತ್ರ ನಿರ್ಮಾಪಕ ಸಂದೇಶ್ ನಾಗರಾಜ್ ಅವರ 80ನೇ ಹುಟ್ಟುಹಬ್ಬ. ಈ ಪ್ರಯುಕ್ತ ಕನ್ನಡ ಚಿತ್ರರಂಗದ ಹಲವಾರು ನಿರ್ದೇಶಕರು, ನಿರ್ಮಾಪಕರು, ನಟ-ನಟಿಯರು ಮೈಸೂರಿಗೆ ಆಗಮಿಸಿ ನಿರ್ಮಾಪಕ ಸಂದೇಶ್ ನಾಗರಾಜ್ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಲವು ನಟ-ನಟಿಯರು ಚಾಮುಂಡಿ ತಾಯಿಯ ದರ್ಶನ ಪಡೆಯಲು ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ನಟ ಸುದೀಪ್ ಸಹ ತಾಯಿಯ ದರ್ಶನ ನಂತರ ಸಂದೇಶ್ ನಾಗರಾಜ್ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು.ಇದನ್ನೂ ಓದಿ:  'ಲ್ಯಾಂಡ್ ಲಾರ್ಡ್' ಚಿತ್ರದಲ್ಲಿ ದುನಿಯಾ ವಿಜಯ್ ಜೊತೆ ಪುತ್ರಿ ರಿತನ್ಯಾ ಸ್ಕ್ರೀನ್​ ಶೇರ್: ಪೋಸ್ಟರ್ ರಿಲೀಸ್

Category

🗞
News
Transcript
00:00Oh
01:00Come on, come on!
01:30Move it out of your head!
01:32Move it out of your head!
01:36Maas Maas, Kichabas!
01:40Maas Maas, Kichabas!
01:42Maas Maas, Kichabas!
01:48No! No! No!
01:50I want to go!
02:20I want to go!
02:50Come on!
03:00Come on!
03:20We'll see you next time.
Be the first to comment
Add your comment

Recommended