Skip to playerSkip to main content
  • 24 minutes ago
ದಾವಣಗೆರೆ: ಮೈಸೂರು ಜಂಬೂ ಸವಾರಿಯಂತೆ ದಾವಣಗೆರೆ ತಾಲೂಕಿನ ಬಯಲುಸೀಮೆ ಮಾಯಕೊಂಡದಲ್ಲಿ ದಸರಾ ಪ್ರಯುಕ್ತ ನಡೆದ ಆನೆ ಗೊಂಬೆಯಾಟ ವಿಶೇಷವಾಗಿ ಗಮನ ಸೆಳೆಯಿತು. ಕೃತಕ ಆನೆಗಳನ್ನು ನಿರ್ಮಾಣ ಮಾಡಿ ಆನೆಗಳ ಮೇಲೆ ದುರ್ಗಾದೇವಿ ಪ್ರತಿಷ್ಠಾಪನೆ ಮಾಡಿ ಅಂಬಾರಿ ಉತ್ಸವ ನೆರವೇರಿಸಲಾಯಿತು. ಕೃತಕ ಅಂಬಾರಿ ಹೊತ್ತು ಸಂಚರಿಸಿದ ಆನೆಗಳನ್ನು ಪೈಲ್ವಾನರ ಸಾಹಸಕ್ಕೆ ಜನರು ಫಿದಾ ಆದರು. ಜಿಲ್ಲೆಯ ಮಾಯಕೊಂಡದಲ್ಲಿ ವಿಶಿಷ್ಟ ಆನೆ ಗೊಂಬೆಯಾಟದೊಂದಿಗೆ ಜನ ಅದ್ಧೂರಿಯಾಗಿ ದಸರಾ ಸಂಭ್ರಮ ಕಣ್ತುಂಬಿಕೊಂಡರು. ಈ ಮೂರು ಕೃತಕ ಆನೆಗಳನ್ನು ಮೂರು ಗರಡಿ ಮನೆಗಳ ಪೈಲ್ವಾನರು ಒಗ್ಗೂಡಿ ಸಿದ್ಧಪಡಿಸಿದ್ದರು.ಚಕ್ಕಡಿ ಗಾಡಿಗೆ ಕಬ್ಬಿಣದ ಸರಳುಕಟ್ಟು ಬಳಸಿ, ಕಪ್ಪು ಬಟ್ಟೆಯಿಂದ ಆನೆಗಳ ರೂಪ ನೀಡಿ ಥೇಟ್ ಆನೆಯಂತೆ ಭಾಸವಾಗುವಂತೆ ವಿಶೇಷ ಅಲಂಕಾರ ಮಾಡಲಾಗಿತ್ತು. ಒಂದು ಆನೆಯ ಮೇಲೆ ತಾಯಿ ದುರ್ಗಾದೇವಿ ಉತ್ಸವ ಮೂರ್ತಿಯೊಂದಿಗೆ ಪುಟ್ಟ ಅಂಬಾರಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಉಳಿದ ಎರಡು ಆನೆಗಳ ಮೇಲೆ ಹಿರಿಯ ಪೈಲ್ವಾನರು ಮಾವುತರಂತೆ ಕುಳಿತು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.ಗ್ರಾಮದ ಯುವಕರು ಆನೆಗಳ ಚಕ್ಕಡಿ ಎಳೆಯುತ್ತ ಮಾಯಕೊಂಡದ ಪ್ರಮುಖ ರಸ್ತೆಗಳಲ್ಲಿ ವೈಭವದ ಮೆರವಣಿಗೆಯಲ್ಲಿ ಸಾಗಿದರು. ಇದಲ್ಲದೆ ರಣಬಾಜೆ, ತಮಟೆಯ ಭೋರ್ಗರೆತಕ್ಕೆ ಪೈಲ್ವಾನರು, ಯುವಕರು ಸಕತ್ ಹೆಜ್ಜೆ ಹಾಕಿದರು. ಗರಡಿಗಳಲ್ಲಿ ಕಲಿತ ಕುಸ್ತಿ ಪಟ್ಟುಗಳನ್ನು ಪ್ರದರ್ಶಿಸಲಾಗಿದ್ದು, ಆನೆ ಗೊಂಬೆಯಾಟಕ್ಕೆ ಮತ್ತಷ್ಟು ಮೆರುಗು ಮೂಡಿತು. ವಿಶಿಷ್ಟ ಆನೆಗಳ ವಿನ್ಯಾಸ, ಅಂಬಾರಿಯ ವೈಭವ ಹಾಗೂ ಪೈಲ್ವಾನರ ಸಾಹಸವನ್ನು ಮಾಯಕೊಂಡ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಕಣ್ತುಂಬಿಕೊಂಡರು. ಮಾಯಕೊಂಡದಲ್ಲಿ ಪಾಳೇಗಾರರ ಕಾಲದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ದಸರಾ ಉತ್ಸವದಲ್ಲಿ ಇಂದಿಗೂ ಜೀವಂತವಾಗಿರಿಸಿರುವುದು ಕಂಡುಬಂತು. ಇದನ್ನೂ ಓದಿ: ಜನಮನ ಗೆದ್ದ ಪಂಜಿನ ಕವಾಯತು, ಡ್ರೋನ್​ ಶೋ, ಬೈಕ್ ಸಾಹಸ: ಮೈಸೂರು ದಸರಾಗೆ ವರ್ಣರಂಜಿತ ತೆರೆ

Category

🗞
News
Transcript
00:00I
00:33Alright, let's go.
01:00I'm going to go home.

Recommended