Skip to playerSkip to main content
  • 1 day ago
ಶಿವಮೊಗ್ಗ: ಮಲೆನಾಡಿನಲ್ಲೂ ಆಯುಧ ಪೂಜೆಯ ಸಂಭ್ರಮ ಮನೆ ಮನೆಯಲ್ಲಿ ಕಳೆಗಟ್ಟಿದೆ. ಮುಂಜಾನಯಿಂದಲೇ ಸೈಕಲ್​ನಿಂದ ಹಿಡಿದು ಲಾರಿ ತನಕ ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಿದರು.ವಾಹನಗಳಿಗೆ ವಿಭೂತಿ, ಅರಿಶಿನ, ಕುಂಕುಮ ಹೂ, ಫಲ ತಾಂಬೂಲಗಳನ್ನು ಇಟ್ಟು ಪೂಜೆ ಮಾಡಿದರು. ಇನ್ನೂ ಕೆಲವರು ದೇವಾಲಯಕ್ಕೆ ತಮ್ಮ ವಾಹನಗಳನ್ನು ತೆಗೆದುಕೊಂಡು ಹೋಗಿ ಪೂಜೆ ನೆರವೇರಿಸಿದರು. ಗಾಡಿಗಳ ಚಕ್ರಕ್ಕೆ ನಿಂಬೆಹಣ್ಣುಗಳನ್ನಿಟ್ಟು ವಾಹನಗಳು ವರ್ಷವಿಡಿ ಯಾವುದೇ ತೊಂದ್ರೆ ಕೊಡದಂತೆ ನಡೆಯಬೇಕೆಂದು ಪ್ರಾರ್ಥಿಸಿ, ಬೂದುಕುಂಬಳದಿಂದ ದೃಷ್ಟಿ ತೆಗೆದು ಅದನ್ನು ವಾಹನದ ಮುಂದೆ ಹೊಡೆದು ಹಾಕುವ ಮೂಲಕ ದೃಷ್ಟಿ ತೆಗೆದರು. ಪಾಂಡವರು ವನವಾಸಕ್ಕೆ ಹೋಗುವ ಮುನ್ನ ಶಮಿ ಮರದಲ್ಲಿ ತಮ್ಮ ಆಯುಧಗಳನ್ನು ಇಟ್ಟು ಹೋಗಿರುತ್ತಾರೆ.‌ ಹಾಗೆಯೇ ವನವಾಸ ಮುಗಿಸಿ ವಾಪಸ್ ಬಂದು ಯುದ್ಧಕ್ಕೆ ತೆರಳುವಾಗ ಶಮಿ ಮರಕ್ಕೆ ಪೂಜೆ ಸಲ್ಲಿಸುತ್ತಾರೆ.‌ ಅಂದಿನಿಂದ ಭಾರತೀಯರಲ್ಲಿ ಈ ಪದ್ಧತಿ ನಡೆದುಕೊಂಡು ಬಂದಿದೆ.‌ಇನ್ನು ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿಯೂ ಇಂದು ವಿಜೃಂಭಣೆಯ  ಆಯುಧ ಪೂಜೆ ಸಂಪನ್ನಗೊಂಡಿದೆ. ಮಹಾರಾಜ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಮನೆತನದ ಖಾಸಾ ಆಯುಧಗಳಿಗೆ, ಚಿನ್ನದ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು. ಬಳಿಕ ಸವಾರಿ ತೊಟ್ಟಿಯಲ್ಲಿ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಒಂಟೆ, ಪಟ್ಟದ ಕುದುರೆಗಳಿಗೂ ಪೂಜೆ ಮಾಡಲಾಯಿತು.ಇದನ್ನೂ ಓದಿ: ಮೈಸೂರು ಅರಮನೆಯಲ್ಲಿ ಕಳೆಗಟ್ಟಿದ ಆಯುಧ ಪೂಜೆ ಸಂಭ್ರಮ: ಖಾಸಾ ಆಯುಧ, ಪಟ್ಟದ ಆನೆ ಕುದುರೆಗಳಿಗೆ ವಿಶೇಷ ಪೂಜೆ   

Category

🗞
News
Transcript
00:28Transcription by CastingWords

Recommended