ಮಂಡ್ಯ: ಬೆಳ್ಳಂಬೆಳಗ್ಗೆ ಕಾಡಾನೆಗಳ ಗುಂಪು ಪ್ರತ್ಯಕ್ಷವಾಗಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಗೋರವನಹಳ್ಳಿ ಗ್ರಾಮದಲ್ಲಿ ನಡೆದಿದೆ.ರೈತನ ಜಮೀನಿಗೆ ಐದು ಕಾಡಾನೆಗಳು ಲಗ್ಗೆ ಇಟ್ಟಿದ್ದು, ಅದರಲ್ಲಿ ಮೂರು ಗಂಡಾನೆ ಹಾಗೂ ಎರಡು ಮರಿಗಳು ಇದ್ದವು. ಕಾಡಾನೆಗಳನ್ನು ಕಂಡು ರೈತರು ಮತ್ತು ಜನರು ಆತಂಕಗೊಂಡಿದ್ದಾರೆ. ಕಾಡಾನೆಗಳ ಹಿಂಡಿನಿಂದ ರೈತರ ಫಸಲು ನಾಶವಾಗಿದೆ. ಹೀಗಾಗಿ, ನಾಡಿಗೆ ಬಂದ ಕಾಡಾನೆಗಳನ್ನು ಓಡಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಕಾಡಾನೆಗಳನ್ನು ಮತ್ತೆ ಕಾಡಿಗಟ್ಟಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಏಕಕಾಲದಲ್ಲಿ ರಸ್ತೆ ದಾಟಿದ 17ಕ್ಕೂ ಹೆಚ್ಚು ಕಾಡಾನೆಗಳು : ಇತ್ತೀಚಿಗೆ ಏಕ ಕಾಲದಲ್ಲಿ 17ಕ್ಕೂ ಹೆಚ್ಚು ಕಾಡಾನೆಗಳು ರಸ್ತೆ ದಾಟಿರುವ ದೃಶ್ಯ ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಮಡಬೂರು ಗ್ರಾಮದಲ್ಲಿ ಕಂಡು ಬಂದಿತ್ತು. ಅಲ್ಲದೇ, ಅಡಕೆ ತೋಟಕ್ಕೆ ನುಗ್ಗಿರುವ ಕಾಡಾನೆಗಳು ಸಂಪೂರ್ಣವಾಗಿ ತೋಟವನ್ನೇ ನಾಶ ಮಾಡಿ ಹೋಗಿದ್ದವು. ಮಡಬೂರು ಗ್ರಾಮದ ಲೋಹಿತಾಶ್ವ ಗೌಡ ಹಾಗೂ ವನಮಾಲಾ ಎಂಬುವರ ಅಡಿಕೆ ತೋಟಕ್ಕೆ ನುಗ್ಗಿ ಸುಮಾರು 600ಕ್ಕೂ ಹೆಚ್ಚು ಅಡಕೆ ಮರಗಳನ್ನು ನೆಲಕ್ಕೆ ಉರುಳಿಸಿದ್ದವು. ಹೀಗಾಗಿ, ಗ್ರಾಮದ ಜನರು ಆತಂಕದಲ್ಲಿಯೇ ಸಮಯ ಕಳೆಯುವಂತಾಗಿತ್ತು. ಬದುಕು ನಡೆಸಲು ಆಸರೆಯಾಗಿದ್ದ ಅಡಕೆ ಗಿಡಗಳು ನೆಲಸಮ ಆಗಿರುವುದರಿಂದಾಗಿ ಗ್ರಾಮದ ರೈತರು ಹತಾಶೆಗೆ ಒಳಗಾಗಿದ್ದರು.ಇದನ್ನೂ ಓದಿ : ಏಕಕಾಲದಲ್ಲಿ ರಸ್ತೆ ದಾಟಿದ 17ಕ್ಕೂ ಹೆಚ್ಚು ಕಾಡಾನೆಗಳು: 600ಕ್ಕೂ ಹೆಚ್ಚು ಅಡಿಕೆ ಮರ ನೆಲಸಮ
Comments