ಬಳ್ಳಾರಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ದಿ ಡೆವಿಲ್' ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ. ಬಹುನಿರೀಕ್ಷಿತ ಚಿತ್ರಕ್ಕೆ ಬಳ್ಳಾರಿಯಲ್ಲಿಯೂ ಭರ್ಜರಿ ಓಪನಿಂಗ್ ಸಿಕ್ಕಿದೆ. ಬಳ್ಳಾರಿ ನಗರದ 4 ಚಿತ್ರಮಂದಿರಗಳಲ್ಲಿಂದು ಬೆಳಗ್ಗೆ 6 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಆರಂಭಗೊಂಡಿದೆ. ಮೊದಲ ದಿನದ ಮೊದಲ ಶೋ ನೋಡಲು ಕಾಯುತ್ತಿದ್ದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಗರದ ಚಿತ್ರಮಂದಿರಗಳತ್ತ ಧಾವಿಸಿದ್ದರು. ಬಳ್ಳಾರಿಯಲ್ಲಿಯೂ ನಟ ದರ್ಶನ್ ಅವರಿಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದು, ಮೊದಲ ದಿನ ಚಿತ್ರಮಂದಿರಗಳು ತುಂಬಿ ತುಳುಕುತ್ತಿವೆ.ಚಿತ್ರಮಂದಿರದ ಹೊರಗಿನ ಸಂಭ್ರಮ ಮಾತ್ರವಲ್ಲದೇ, ಚಿತ್ರಮಂದಿರದೊಳಗೂ ಅಭಿಮಾನಿಗಳ ಸಂಭ್ರಮ ಜೋರಾಗೇ ನಡೆದಿದೆ. ಬೆಳ್ಳಿತೆರೆ ಮೇಲೆ ದರ್ಶನ್ ಅವರ ಎಂಟ್ರಿ ಆಗಿದ್ದೇ ತಡ, ಫ್ಯಾನ್ಸ್ ಖುಷಿ ಮುಗಿಲು ಮುಟ್ಟಿತ್ತು. ನಟ ದರ್ಶನ್ ಅವರನ್ನು ಬಿಗ್ ಸ್ಕ್ರೀನ್ ಮೇಲೆ ನೋಡಲು ಕಾತರರಾಗಿದ್ದ ಫ್ಯಾನ್ಸ್ ಥಿಯೇಟರ್ ಎದುರು ದರ್ಶನ್ ಅವರಿಗೆ ಜೈಕಾರ ಹಾಕುತ್ತಾ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.ಇದನ್ನೂ ಓದಿ: 'ಕೊನೆಗೂ ಗೆದ್ವಿ, ಬ್ಲಾಕ್ಬಸ್ಟರ್': ದಾಸನ 'ದಿ ಡೆವಿಲ್' ಚಿತ್ರಕ್ಕೆ ಪ್ರೇಕ್ಷಕರು ಕೊಟ್ಟ ವಿಮರ್ಶೆಗಳಿವು!ಇದನ್ನೂ ಓದಿ: 'ಡೆವಿಲ್' ಹಬ್ಬ: ಚಿತ್ರಮಂದಿರದಲ್ಲಿ ಮೊದಲ ಶೋ ವೀಕ್ಷಿಸಿದ ದರ್ಶನ್ ಪತ್ನಿ, ಪುತ್ರ, ನಟ ಧನ್ವೀರ್
Be the first to comment