ಬಾಗಲಕೋಟೆ: ರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆಯಲ್ಲಿ ತುಳಸಿಗೇರಿ ಗ್ರಾಮದ ಯುವತಿ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಕರ್ನಾಟಕದ ಪರ ಭಾಗಿಯಾಗಿ ರಾಜ್ಯಕ್ಕೆ ಮೊದಲ ಸ್ಥಾನ ದೊರಕಿಸಿಕೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ. ಇತ್ತೀಚಿಗೆ ಓಡಿಶಾದಲ್ಲಿ ನಡೆದ ನ್ಯಾಷನಲ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಜಿಲ್ಲೆಯ ತುಳಿಸಿಗೇರಿ ಗ್ರಾಮದ ಗಂಗಾ ದಂಡಿನ ಎಂಬ ಯುವತಿ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಜಿಲ್ಲೆಯು ಸೈಕ್ಲಿಂಗ್ನಲ್ಲಿ ಇಡೀ ದೇಶದಲ್ಲಿ ತನ್ನದೇ ಆದ ಮೇಲುಗೈ ಸಾಧಿಸುತ್ತ ಬಂದಿದೆ. ಕರ್ನಾಟಕದ ತುಳಿಸಿಗೇರಿ ಗ್ರಾಮ ಕ್ರೀಡೆಯಲ್ಲಿ ದೇಶದ ಕೀರ್ತಿ ಹೆಚ್ಚಿಸುವ ಗ್ರಾಮವಾಗಿದ್ದು, ಸೈಕ್ಲಿಂಗ್ನಲ್ಲಿ ಮೊದಲ ಸ್ಥಾನ ಬರುವ ಮೂಲಕ ಮಹತ್ವ ಪಡೆದುಕೊಂಡಿದೆ. ಚಿಕ್ಕ ವಯಸ್ಸಿನಲ್ಲಿಯೇ ಸೈಕ್ಲಿಂಗ್ ತುಳಿಯುವ ಅಭ್ಯಾಸಕ್ಕೆ ಇಳಿದ ಯುವತಿ ಗಂಗಾ ದಂಡಿನ ಅವರು ಬಡ ಕುಟುಂಬದ ರೈತನ ಮಗಳು. ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದಿರುವ ಅವರ ತಂದೆ ಸಿದ್ದಪ್ಪ ತಮ್ಮ ನಾಲ್ಕು ಹೆಣ್ಣು ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸುವ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಮೂಡಿಸಿದ್ದಾರೆ.ಬಡತನ ಇದ್ದರೂ ಮಕ್ಕಳಿಗೆ ಏನೂ ಕಡಿಮೆ ಮಾಡದೇ ಎಲ್ಲರೂ ಹೆಮ್ಮೆ ಪಡುವಂತೆ ಮಕ್ಕಳನ್ನು ಬೆಳೆಸಿದ್ದಾರೆ. ಗಂಡು ಮಕ್ಕಳು ಇಲ್ಲದಿದ್ದರೂ ಹೆಣ್ಣುಮಕ್ಕಳನ್ನೇ ನನ್ನ ಜೀವಾ ಅಂತಾ ತಿಳಿದು ಗಂಡು ಮಕ್ಕಳಂತೆ ಬೆಳೆಸಿದ್ದಾರೆ.ಇದನ್ನೂ ಓದಿ : ವೇಟ್ ಲಿಫ್ಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ: ಹಾಸನದ ಸಾಧಕಿಗೆ 'ಏಕಲವ್ಯ ಪ್ರಶಸ್ತಿ' ಪ್ರದಾನ
Be the first to comment