ತುಮಕೂರು: ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆಸಲಾಗುತ್ತಿರುವ ದಸರಾ ಮಹೋತ್ಸವದಲ್ಲಿ ದೇವಿಗೆ ಚಂದ್ರಘಂಟಾ ಅಲಂಕಾರವನ್ನು ಮಾಡಿ ಪೂಜಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಕುಟುಂಬ ಸಮೇತರಾಗಿ ಬಂದು ಹೋಮ ಹವನದಲ್ಲಿ ಪಾಲ್ಗೊಂಡರು.ಪ್ರಧಾನ ಅರ್ಚಕ ರವಿ ಶರ್ಮಾ ಅವರು ಮಾತನಾಡಿ, "ನವರಾತ್ರಿ ಹಬ್ಬದ ಮೂರನೇ ದಿನವಾದ ಮಂಗಳವಾರ ದೇವಿಗೆ ವಿಶೇಷವಾಗಿ ಚಂದ್ರಘಂಟಾ ಅಲಂಕಾರವನ್ನು ಮಾಡಿ ಪೂಜಿಸಲಾಯಿತು. ಹಿಂದೂ ಸಂಪ್ರದಾಯ, ನಂಬಿಕೆಯಂತೆ ಹೆಣ್ಣಿನಲ್ಲಿ ಎಲ್ಲಾ ಗುಣಗಳು ಅಡಗಿವೆ. ಸಹನಾಮಯಿ ಎಂದು ಕೂಡ ಮಹಿಳೆಯರನ್ನು ಕರೆಯಲಾಗುತ್ತದೆ. ಶಾಂತಿ ಮತ್ತು ಸಹನೆಯ ಸಂಕೇತವಾಗಿ ದೇವಿಗೆ ಚಂದ್ರಘಂಟಾ ಅಲಂಕಾರವನ್ನು ಮಾಡಲಾಗಿದೆ. ಪ್ರಾತಃ ಕಾಲದಲ್ಲಿ ಕಳಸರಾದನೆ ಸೇರಿದಂತೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಗಿದೆ. ಮಂಗಳವಾರದ ಪೂಜಾ ವಿಧಿವಿಧಾನದ ಸೇವೆಯನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕುಟುಂಬ ನೆರವೇರಿಸಿದೆ" ಎಂದರು.ಅರ್ಚಕ ಸತ್ಯವೃಂದ ಮಾತನಾಡಿ, "ಮಂಗಳವಾರ ಬೆಳಗ್ಗೆಯಿಂದಲೂ, ಬ್ರಾಹ್ಮಿ ಲಗ್ನದಲ್ಲಿ ಸುಪ್ರಭಾತ, ಗಂಗಾ ಪೂಜೆ, ಮಹಾಲಕ್ಷ್ಮಿ ಸಮೇತ ದುರ್ಗಾ ಪೂಜೆ ಕಳಸಾರಾದನೆ, ನವಗ್ರಹಹೋಮ, ಗಣಪತಿ ಹೋಮ ನೆರವೇರಿಸಲಾಯಿತು. ದಿನವಿಡೀ ಲಲಿತ ಸಹಸ್ರ ನಾಮಪಾರಾಯಣ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿದವು" ಎಂದು ಹೇಳಿದರು.ಇದನ್ನೂ ಓದಿ: ಶಿವಮೊಗ್ಗದಲ್ಲೂ ದಸರಾಗೆ ಅದ್ಧೂರಿ ಚಾಲನೆ: 650 ಕೆ.ಜಿ ತೂಕದ ಬೆಳ್ಳಿಯ ಚಾಮುಂಡೇಶ್ವರಿ ವಿಗ್ರಹ ಮೆರವಣಿಗೆ
Be the first to comment