ಮೈಸೂರು: ತಿ.ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಭೀತಿಯ ವಾತಾವರಣ ಉಂಟಾಗಿದೆ. ರಾಜೇಶ್ ಎಂಬವರ ಇಟ್ಟಿಗೆಗೂಡಿನ ಬಳಿ ಅ.21ರ ಮುಂಜಾನೆ 4 ಮತ್ತು 4:30ರ ಸಮಯದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸೆರೆಯಾಗಿದೆ. ಕಳೆದ ಎರಡು ತಿಂಗಳ ಹಿಂದೆ ದೊಡ್ಡ ನಾಯಿಯನ್ನು ಈ ಚಿರತೆ ಹಿಡಿದುಕೊಂಡು ಹೋಗಿತ್ತು. ಮತ್ತೆ ಈ ದಿನ ಮುಂಜಾನೆ ಮರಿನಾಯಿಯನ್ನು ಹಿಡಿದುಕೊಂಡು ಹೋಗಿದೆ ಎಂದು ರಾಜೇಶ್ ಕುಟುಂಬದವರು ಹೇಳಿದ್ದಾರೆ. ಘಟನೆಯ ನಂತರ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಚಿರತೆಯ ಹಾದಿ ಪತ್ತೆ ಹಚ್ಚುವ ಕಾರ್ಯ ಪ್ರಾರಂಭಿಸಿದ್ದಾರೆ. ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಅರಣ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಯಾರು ರಾತ್ರಿ ವೇಳೆ ಹೊರಗಡೆ ಸಂಚರಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಸದ್ಯ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಇಟ್ಟಿದ್ದಾರೆ. ಚಿರತೆಯ ಪ್ರತ್ಯಕ್ಷದಿಂದ ಉಕ್ಕಲಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.ಇದನ್ನೂ ಓದಿ: ಹಾವೇರಿ: ರೈತ ಸಹೋದರರ ಮೇಲೆ ಚಿರತೆ ದಾಳಿ; ತಮ್ಮ ಸಾವು, ಅಣ್ಣನಿಗೆ ಗಾಯ
Be the first to comment