ಬಳ್ಳಾರಿ: ಭಾನುವಾರ ರಾತ್ರಿ ಸಂಪೂರ್ಣ ಚಂದ್ರಗ್ರಹಣ ನಡೆಯಿತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಅರ್ಚಕರು ದೇವಸ್ಥಾನಗಳನ್ನು ಶುಚಿಗೊಳಿಸಿ, ಪೂಜೆ ಸಲ್ಲಿಸಿದರು. ಬಳ್ಳಾರಿಯ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ: ಕೃಷ್ಣನಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕ ಮಾಡಲಾಯಿತು. ಗ್ರಹಣ ಸಂದರ್ಭದಲ್ಲಿ ಅರ್ಚಕರು ಜಪದಲ್ಲಿ ನಿರತರಾಗಿದ್ದರು. ಕೃಷ್ಣ ದೇವಸ್ಥಾನದ ಜೊತೆಗೆ ಬಳ್ಳಾರಿಯ ಕೋಟೆ ಮಲ್ಲೇಶ್ವರ, ಹಂಪಿ ವಿರೂಪಾಕ್ಷೇಶ್ವರ, ವಡಕರಾಯ ಸ್ವಾಮಿ, ಕುಮಾರಸ್ವಾಮಿ ಬಳ್ಳಾರಿ ದುರ್ಗಮ್ಮ ದೇಗುಲದಲ್ಲಿಯೂ ವಿಶೇಷ ಪೂಜೆ ನೆರವೇರಿತು. ಗ್ರಹಣ ಹೀಗಿತ್ತು: ಬಳ್ಳಾರಿಯ ಆಗಸದಲ್ಲಿ ಚಂದ್ರ ಕೆಂಪು ಬಣ್ಣದಲ್ಲಿ ಕಂಗೊಳಿಸಿದ. ರಾಹುಗ್ರಸ್ತ ಚಂದ್ರಗ್ರಹಣದ ವೇಳೆ ರಕ್ತ ಚಂದನ ಬಣ್ಣದಲ್ಲಿ ಕಂಡದ್ದು, ಕಣ್ಮನ ಸೆಳೆಯಿತು. ಖಗೋಳ ಕೌತುಕ ನೋಡಲು ಸಾರ್ವಜನಿಕರು ಮಧ್ಯರಾತ್ರಿವರೆಗೂ ಕಾದು ಕುಳಿತಿದ್ದರು. ಬಳ್ಳಾರಿಯಲ್ಲಿ ರಾತ್ರಿ 9:57ರಿಂದ ಮಧ್ಯರಾತ್ರಿ 1:27 ನಿಮಿಷಕ್ಕೆ ಗ್ರಹಣ ಮುಕ್ತಾಯವಾಯಿತು. ನಭೋ ಮಂಡಲದಲ್ಲಿ ಈ ವರ್ಷದ ಕೊನೆಯ ಚಂದ್ರಗ್ರಹಣ ಹಾಗೂ 2ನೇ ರಕ್ತಚಂದ್ರ ಗೋಚರವಾಗಿದೆ. ಜನರು ಪೂರ್ಣ ಚಂದ್ರ ಗ್ರಹಣ ನೋಡಿ ಖುಷಿಪಟ್ಟರು.ಇದನ್ನೂ ಓದಿ: ಕೆಂಬಣ್ಣದಲ್ಲಿ 'ಚಂದ'ಮಾಮ: ಅಪರೂಪದ ಖಗೋಳ ವಿದ್ಯಮಾನ ವೀಕ್ಷಿಸಿದ ಜನ
Be the first to comment