ಚಾಮರಾಜನಗರ: ಇಂದು (ಶುಕ್ರವಾರ) ಬೆಳ್ಳಂಬೆಳಗ್ಗೆ ಕಾಡಾನೆಯೊಂದು ರಸ್ತೆಗಿಳಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ನಡೆಯಿತು. ಕಾಡಾನೆ ಬರುತ್ತಿದ್ದಂತೆ ಭಯದಿಂದ ವಾಹನದಲ್ಲಿದ್ದ ಪ್ರವಾಸಿಗರು ಚೀರಿಕೊಂಡರು. ಕೆಲ ತಿಂಗಳಿನಿಂದ ತರಕಾರಿ ಸಾಗಿಸುವ ವಾಹನಗಳನ್ನು ಅಡ್ಡಗಟ್ಟಿ ಆನೆ ದಾಳಿ ಮಾಡುತ್ತಿದೆ. ಹೀಗಾಗಿ, ಬಂಡೀಪುರದಿಂದ ಊಟಿಗೆ ತೆರಳಲು ಜೀವ ಕೈಯಲ್ಲೇ ಹಿಡಿದು ಹೋಗಬೇಕಾದ ಪರಿಸ್ಥಿತಿ ಇದೆ.ಗುರುವಾರ ಸಂಜೆಯೂ ರಸ್ತೆಗಿಳಿದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆಯ ಗಸ್ತು ಸಿಬ್ಬಂದಿ ಕಾಡಿಗಟ್ಟುವಾಗ ಇಲಾಖೆ ಜೀಪನ್ನು ಅಟ್ಟಾಡಿಸಿದ ಘಟನೆಯೂ ನಡೆದಿದೆ.ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾಡಾನೆಗಳ ಸಂಚಾರ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸವಾರರು ನಿತ್ಯ ಭಯದಲ್ಲೇ ಸಂಚರಿಸುತ್ತಿದ್ದಾರೆ. ಮೈಸೂರು-ಊಟಿ ಹೆದ್ದಾರಿಯಲ್ಲಿ ಹಾದುಹೋಗುವ ಬಂಡೀಪುರದಲ್ಲಿ ರಸ್ತೆಗಿಳಿಯುವ ಕಾಡಾನೆಗಳು ಒಂದೆಡೆಯಾದರೆ, ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಚಾಮರಾಜನಗರ ಗಡಿಭಾಗದ ಅಸನೂರಿನಲ್ಲಿ ನಿತ್ಯವೂ ಕಬ್ಬು ಸಾಗಿಸುವ ಲಾರಿಗಳು, ಬಾಳೆ ಸಾಗಿಸುವ ಗೂಡ್ಸ್ ವಾಹನಗಳ ಮೇಲೆ ಆನೆಗಳು ದಾಳಿ ಮಾಡುತ್ತಿವೆ.ಇತ್ತೀಚೆಗೆ ರಸ್ತೆಗಿಳಿದ ಕಾಡಾನೆಯ ಜೊತೆ ಕೆಲವರು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿ, 5-6 ಮಂದಿ ದಂಡವನ್ನೂ ಕಟ್ಟಿದ್ದಾರೆ. ಇದನ್ನೂ ಓದಿ: ಆಯತಪ್ಪಿ ಗುಂಡಿಗೆ ಬಿದ್ದ ಕಾಡಾನೆ: ಒದ್ದಾಟದ ನಂತರ ಮತ್ತೆ ಮೇಲೆದ್ದು ಓಡಿತು- ವಿಡಿಯೋ - ELEPHANT FALLS INTO A PIT
Be the first to comment