ದಾವಣಗೆರೆ : ತನ್ನ ಎರಡು ಮರಿಗಳನ್ನು ಭುಜದ ಮೇಲೆ ಹೊತ್ತು ರಸ್ತೆ ಮಧ್ಯೆ ಕರಡಿಯೊಂದು ಗಾಂಭೀರ್ಯದಿಂದ ಹೆಜ್ಜೆ ಹಾಕಿರುವ ದೃಶ್ಯ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ-ಸೂಳೆಕೆರೆ ರಸ್ತೆಯಲ್ಲಿ ಕಂಡುಬಂದಿದ್ದು, ವಿಡಿಯೋ ವೈರಲ್ ಆಗಿದೆ. ತನ್ನ ಎರಡು ಪುಟ್ಟ ಮರಿಗಳನ್ನು ಹೊತ್ತು ರಸ್ತೆ ಮಧ್ಯೆ ನಡೆದ ಕರಡಿಯನ್ನು ಕಂಡ ಜನರು ಆಶ್ಚರ್ಯಚಕಿತರಾಗಿದ್ದಾರೆ. ಅಲ್ಲದೇ, ವಾಹನ ಸವಾರರು ಹಾಗೂ ಸ್ಥಳೀಯರು ಕರಡಿ ಓಡಾಟದಿಂದ ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ಹೋಗುವ ವಾಹನ ಸವಾರನೊಬ್ಬ ರಾಜಾರೋಷವಾಗಿ ತಿರುಗಾಡುತ್ತಿರುವ ಕರಡಿಯ ದೃಶ್ಯವನ್ನು ತನ್ನ ಮೊಬೈಲ್ ಫೋನ್ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುತ್ತಿವೆ. ಅಲ್ಲದೇ, ಈ ಭಾಗದಲ್ಲಿ ಚಿರತೆ, ಕರಡಿಯ ಹಾವಳಿಯೂ ಹೆಚ್ಚಿದೆ. ಇದೀಗ ಇಲ್ಲಿ ಕಂಡುಬಂದಿರುವ ಕರಡಿಯನ್ನು ಸೆರೆ ಹಿಡಿಯಿರಿ ಎಂದು ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ರಸ್ತೆಯಲ್ಲಿ ಕರಡಿ ಓಡಾಟವನ್ನು ನೋಡಿರುವ ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರು ಹುಷಾರಾಗಿರುವಂತೆ ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ : ದಾವಣಗೆರೆಯ ಜನವಸತಿ ಪ್ರದೇಶದಲ್ಲಿ ಕರಡಿ ಸಂಚಾರ: ಓರ್ವನ ಮೇಲೆ ದಾಳಿಗೆ ಯತ್ನ- ಸಿಸಿಟಿವಿ ವಿಡಿಯೋ - BEAR IN RESIDENTIAL AREA