Skip to playerSkip to main content
  • 3 months ago
ಮೈಸೂರು: ಮರಿ ಸತ್ತು ಎರಡು ದಿನಗಳು ಕಳೆದ್ರೂ ತನ್ನೊಂದಿಗೆ ಇಟ್ಟುಕೊಂಡು ತಾಯಿ ಕೋತಿ ಚಾಮುಂಡಿಬೆಟ್ಟದ ತಪ್ಪಲಿನ ಮೆಟ್ಟಿಲುಗಳ ಮೇಲೆ ಮೂಕರೋಧನೆ ಅನುಭವಿಸುತ್ತಿದ್ದ ದೃಶ್ಯ ಮನಕಲುಕುವಂತಿತ್ತು.ಎರಡು ದಿನಗಳ ಹಿಂದೆ ಮರಿ ಕೋತಿ ಮೃತಪಟ್ಟಿತ್ತು. ಎರಡು ದಿನಗಳಿಂದಲೂ ಮೃತ ಕೋತಿ ಇಟ್ಟುಕೊಂಡು ತಾಯಿ ಕೋತಿ ಓಡಾಡುತ್ತಿತ್ತು. ಇದನ್ನು ಗಮನಿಸಿದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸೈಕಲ್ ಸ್ಟ್ಯಾಂಡ್‌ನ ಯುವಕ ಯಶ್ವಂತ್‌ ಮೃತ ಕೋತಿ ಮರಿಯ ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದರು.ಮರಿಯಾನೆಯನ್ನು ತಾಯಿ ಮಡಿಲಿಗೆ ಸೇರಿಸಿದ ಅರಣ್ಯ ಇಲಾಖೆ ಸಿಬ್ಬಂದಿ: ತಾಯಿಯಿಂದ ಬೇರ್ಪಟ್ಟ ಮರಿ ಆನೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿ, ಮತ್ತೆ ತಾಯಿ ಆನೆಯ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ವರ್ತಿ ಹಾಡಿಯಲ್ಲಿ ಆಹಾರ ಅರಸಿ ಬಂದ ಆನೆಗಳ ಹಿಂಡಿನಿಂದ ಮರಿಯಾನೆ ಬೇರ್ಪಟ್ಟಿತ್ತು. ತಾಯಿ ಆನೆಯಿಂದ ಬೇರ್ಪಟ್ಟ ಬಳಿಕ ಒಂಟಿಯಾದ ಮರಿ ಹಾಡಿಯಲ್ಲಿ ಓಡಾಡುತ್ತಿತ್ತು.ಇದನ್ನು ನೋಡಿದ ಹಾಡಿ ನಿವಾಸಿಗಳು, ಮರಿ ಆನೆ ಇರುವುದನ್ನು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು, ಮರಿ ಆನೆಯನ್ನು ಕಾಡಂಚಿನ ಪ್ರದೇಶದಲ್ಲಿ ಕರೆದೊಯ್ದು, ಜೋಪಾನವಾಗಿ ತಾಯಿ ಆನೆಯನ್ನು ಸೇರುವಂತೆ ಮಾಡಿದ್ದರು. ಇದನ್ನೂ ಓದಿ: ಗದಗ: ಮೊಟ್ಟೆ ಸಮೇತ ನಾಗರಹಾವು ರಕ್ಷಣೆ: WATCH VIDEO..ಇದನ್ನೂ ಓದಿ: ಕಬಿನಿ ಹಿನ್ನೀರಿನ ಕೆರೆಯಲ್ಲಿ ಹುಲಿರಾಯ ರಿಲ್ಯಾಕ್ಸ್​: ವಿಡಿಯೋ ನೋಡಿ

Category

🗞
News
Transcript
00:00Thank you for listening.
00:30Thank you for listening.
Be the first to comment
Add your comment

Recommended