ಚಾಮರಾಜನಗರ: ದೇಶದ ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಸಫಾರಿಯಲ್ಲಿ ಹುಲಿಯೊಂದು ತನ್ನ ಎರಡು ಮರಿಗಳೊಂದಿಗೆ ಕೆರೆಯ ದಡದಲ್ಲಿ ರಿಲಾಕ್ಸ್ಗೆ ಜಾರಿದೆ. ಟೈಗರ್ ಫ್ಯಾಮಿಲಿಯ ಅಪರೂಪದ ದೃಶ್ಯ ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ.ಬಂಡೀಪುರದ ಸಫಾರಿ ಝೋನ್ನ ಬೋಳುಗುಡ್ಡ ಸಮೀಪ ಆಲಗಟ್ಟೆ ಕೆರೆಯಲ್ಲಿ ಹುಲಿಯು ತನ್ನ ಎರಡು ಮರಿಗಳೊಂದಿಗೆ ಕೆರೆಯಲ್ಲಿ ಕೂಲ್ ಕೂಲ್ ಆಗಿದ್ದು, ನೀರು ಕುಡಿಯುತ್ತ ಮರಿಗಳ ಜೊತೆ ಚಿನ್ನಾಟ ಆಡಿದೆ.ಒಂದು ಮರಿ ಹುಲಿ ತಾಯಿ ಜೊತೆ ಇದ್ದರೆ, ಮತ್ತೊಂದು ಪೊದೆಯಿಂದ ಬಂದು ಒಟ್ಟಿಗೆ ಸೇರಿಕೊಂಡ ದೃಶ್ಯ ಸಫಾರಿಗೆ ತೆರಳಿದ್ದ ಪ್ರವಾಸಿಗರ ಕ್ಯಾಮರಾದಲ್ಲಿ ಬುಧವಾರ ಸಂಜೆ ಸೆರೆಯಾಗಿದೆ. ಈ ದೃಶ್ಯವನ್ನು ಕಂಡು ಸಫಾರಿಗರು ರೋಮಾಂಚಿತರಾಗಿದ್ದಾರೆ.ಬಂಡೀಪುರ ಅಭಯಾರಣ್ಯದಲ್ಲಿ ಅಧಿಕ ಕೆರೆಗಳು ತುಂಬಿರುವ ಕಾರಣ ಸಫಾರಿ ವೇಳೆ ಇತ್ತೀಚೆಗೆ ಹೆಚ್ಚು ಹುಲಿಗಳು ಕಾಣಸಿಗುತ್ತಿದೆ. ಅದರಲ್ಲೂ ಬಹುತೇಕ ಹುಲಿಗಳು ಹೆಚ್ಚಾಗಿ ಕೆರೆಗಳ ಬಳಿಯೇ ಕಂಡುಬರುತ್ತಿವೆ. ಬಂಡೀಪುರದ ಹುಲಿ ಕುಟುಂಬದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಮೈಸೂರು: ನಾಗರ ಹಾವನ್ನು ಮನೆಯೊಳಗೆ ಬರಲು ಬಿಡದ ಸಾಕುನಾಯಿ- ವಿಡಿಯೋ ನೋಡಿ
Be the first to comment