ಬೀಟ್ ರೂಟ್ ಅನ್ನು ಅದೆಷ್ಟೋ ಶತಮಾನಗಳಿಂದ ಚರ್ಮದ ಲಾಭಕ್ಕಾಗಿ ಬಳಕೆ ಮಾಡಲಾಗುತ್ತೆ. ಚರ್ಮಕ್ಕೆ ಕಾಂತಿ ನೀಡಲು, ಚರ್ಮದ ರಂಧ್ರಗಳನ್ನು ಕುಗ್ಗಿಸಲು , ಕಪ್ಪಾಗಿರುವ ಚರ್ಮವನ್ನು ತಿಳಿಗೊಳಿಸಲು ಹೀಗೆ ಇತ್ಯಾದಿ ಕಾರಣಗಳಿಂದಾಗಿ ಬೀಟ್ ರೂಟ್ ಪ್ರಸಿದ್ಧಿ ಪಡೆದಿದೆ. ನಿಜ ಹೇಳಬೇಕು ಎಂದರೆ, ಕಪ್ಪು ತ್ವಚೆ ಇರುವವರಿಗಿಂತ ಹೆಚ್ಚಾಗಿ ಬಿಳಿಯ ತ್ವಚೆಯನ್ನು ಹೊಂದಿರುವವರು ಬೀಟ್ ರೂಟ್ ನ್ನು ತಮ್ಮ ಚರ್ಮದ ಕಾಂತಿ ಹೆಚ್ಚಿಸುವ ಸಲುವಾಗಿ ಬಳಕೆ ಮಾಡುತ್ತಾರೆ. ಆದರೆ ನಿಮ್ಮ ಚರ್ಮದ ಬಣ್ಣವನ್ನು ಪರಿಗಣನೆ ತೆಗೆದುಕೊಳ್ಳದೆ ನೀವು ನಿಮ್ಮ ಚರ್ಮಕ್ಕೆ ಬೀಟ್ ರೂಟ್ ಬಳಕೆ ಮಾಡಿದರೆ, ಖಂಡಿತವಾಗಿಯೂ ಉತ್ತಮ ಫಲಿತಾಂಶವನ್ನು ಪ್ರತಿಯೊಬ್ಬರೂ ಕೂಡ ಪಡೆಯಲು ಸಾಧ್ಯವಿದೆ ಮತ್ತು ನಿಮ್ಮ ಚರ್ಮ ಕಾಂತಿಯುತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಚರ್ಮದಲ್ಲಿರುವ ರಂಧ್ರಗಳನ್ನು ಕಡಿಮೆ ಮಾಡುವುದು ಮತ್ತು ಡಾರ್ಕ್ ಸ್ಪಾಟ್ ಗಳನ್ನು ನಿವಾರಿಸುವ ಕೆಲಸವನ್ನು ಬೀಟ್ ರೂಟ್ ಮಾಡುತ್ತದೆ.
Be the first to comment