ಹೈದರಾಬಾದ್: ತೆಲಂಗಾಣ ಸರ್ಕಾರ ಹಮ್ಮಿಕೊಂಡಿರುವ ರೈಸಿಂಗ್ ಗ್ಲೋಬಲ್ ಸಮ್ಮಿಟ್ನಲ್ಲಿ ರಾಮೋಜಿ ಫಿಲ್ಮ್ ಸಿಟಿ(RFC)ಯ ಸ್ಟಾಲ್ ಎಲ್ಲರನ್ನು ಆಕರ್ಷಿಸಿದೆ. ಪ್ರವಾಸೋದ್ಯಮ ವಿಭಾಗದಲ್ಲಿ ಆರ್ ಎಫ್ ಸಿಯ ಸ್ಟಾಲ್ ಹಾಕಲಾಗಿದೆ. ಪ್ರವಾಸೋದ್ಯಮ ಮತ್ತು ಚಿತ್ರ ನಿರ್ಮಾಣ ಕ್ಷೇತ್ರದಲ್ಲಿನ ಅವಕಾಶಗಳು ಹಾಗೂ ವಿಶ್ವದ ಅತಿ ದೊಡ್ಡ ಫಿಲ್ಮ್ ಸಿಟಿಯ ಕುರಿತು ವಿವರಿಸಿರುವುದು ನೋಡುಗರ ಗಮನ ಸೆಳೆದಿದೆ.ಈ ಸ್ಟಾಲ್ ನಲ್ಲಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈವರೆಗೆ ನಿರ್ಮಾಣವಾದ ಚಲನಚಿತ್ರಗಳು ಮತ್ತು ಇಲ್ಲಿಗೆ ಭೇಟಿ ನೀಡಿದ ಪ್ರಸಿದ್ಧ ವ್ಯಕ್ತಿಗಳ ಫೋಟೋ, ವಿಡಿಯೋ ತುಣುಕಗಳನ್ನು ಪ್ರದರ್ಶಿಸಲಾಗಿದೆ. ಈ ಸ್ಟಾಲ್ ಗೆ ಭೇಟಿ ನೀಡಿದ ಗಣ್ಯರು, ನಟರಿಗೆ ಆರ್ ಎಫ್ ಸಿಯಲ್ಲಿ ಸಿಗುವ ಆತಿಥ್ಯ, ಚಿತ್ರ ನಿರ್ಮಾಣಕ್ಕೆ ಇರುವ ಸೌಲಭ್ಯಗಳ ಕುರಿತು ವಿವರಿಸಲಾಯಿತು. ರಾಮೋಜಿ ಗ್ರೂಪ್ ಸಿಎಂಡಿ ಸಿಹೆಚ್ ಕಿರಣ್, ಫಿಲ್ಮ್ ಸಿಟಿಯ ಎಂಡಿ ವಿಜಯೇಶ್ವರಿ, ಸಂಸ್ಥೆಯ ಸಲಹೆಗಾರ ಸಾಂಬಸಿವ ರಾವ್ ಮತ್ತು ಇತರರು ಸ್ಟಾಲ್ ಗೆ ಭೇಟಿ ನೀಡಿ ವೀಕ್ಷಿಸಿದರು. ಇದನ್ನೂ ಓದಿ: ರಾಮೋಜಿ ಗ್ಲಾಂಪಿಂಗ್: ಪ್ರಕೃತಿಯಲ್ಲಿ ವಿಶ್ರಾಂತಿ ಪಡೆಯಲು ಬಯಸುವಿರಾ?; ಹಾಗಾದ್ರೆ ಫಿಲ್ಮ್ ಸಿಟಿಗೆ ಬನ್ನಿ!
Be the first to comment