ಹುಬ್ಬಳ್ಳಿ(ಧಾರವಾಡ): "ಬಿಹಾರ ಚುನಾವಣೆಯಲ್ಲಿ ಬಿಜೆಪಿ ಮೋಸದಿಂದ ಗೆದ್ದಿದೆ. ಮೋಸದಿಂದ ಚುನಾವಣೆ ಗೆದ್ದ ಪ್ರಧಾನಿಯನ್ನು ನಾನು ಎಲ್ಲೂ ನೋಡೇ ಇಲ್ಲ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಟೀಕಿಸಿದರು.ನಗರದಲ್ಲಿಂದು ಮಾತನಾಡಿದ ಅವರು, "ದೇಶದಲ್ಲಿ ಬಾಂಬ್ ಸ್ಫೋಟಗೊಂಡಾಗ ಪ್ರಧಾನಿ ಮೋದಿ ಭೂತಾನ್ ರಾಜನ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಬಾಂಬ್ ಸ್ಫೋಟವಾದಾಗ ಅವರು ವಾಪಸ್ ಬರಬಹುದಿತ್ತು" ಎಂದರು."ಇಡೀ ದೇಶದಲ್ಲಿ ಬಡವನಿಗೆ ಭೂಮಿ ಕೊಟ್ಟದ್ದು ಇಂದಿರಾ ಗಾಂಧಿ. ಪಾಕಿಸ್ತಾನ ವಿಭಾಗ ಮಾಡಿ ಬಾಂಗ್ಲಾದೇಶ ಮಾಡಿದ್ದು ಇಂದಿರಾ ಗಾಂಧಿ. ಅವರನ್ನು ಅಟಲ್ ಬಿಹಾರಿ ವಾಜಪೇಯಿ ಐರನ್ ಲೇಡಿ ಎಂದು ಕರೆದಿದ್ದಾರೆ" ಎಂದು ಇದೇ ವೇಳೆ ಹೇಳಿದರು.ರಾಜ್ಯದಲ್ಲಿ ಅಧಿಕಾರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, "ಈ ಬಗ್ಗೆ ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳುತ್ತದೆ. ನಾನು ಹೆಚ್ಚು ಮಾತನಾಡುವುದಿಲ್ಲ" ಎಂದರು."ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೆಹಲಿಗೆ ಹೋಗಿದ್ದಾರೆ. ಐದು ಪ್ರಮುಖ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದಿಡಲಾಗಿದೆ. ಕಾದು ನೋಡೋಣ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು. ಆದಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡಿಕೊಳ್ಳಬೇಕು" ಎಂದು ತಿಳಿಸಿದರು.ಇದನ್ನೂ ಓದಿ: ಬಿಳಿಮಲೆಯವರು ಹೇಳಿದ್ದು ತಪ್ಪು, ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ: ತಲ್ಲೂರು ಶಿವರಾಮ ಶೆಟ್ಟಿ
Be the first to comment