ತುಮಕೂರು : ನಗರದ ಪ್ರತಿಷ್ಠಿತ ಗಣಪತಿ ಮೂರ್ತಿಗಳಲ್ಲಿ ಒಂದಾಗಿರುವಂತಹ ನಾಗರಕಟ್ಟೆ ಹಿಂದೂ ಮಹಾಗಣಪತಿ ನಿಮಜ್ಜನ ಮಹೋತ್ಸವವು ಸಂಭ್ರಮ ಸಡಗರದಿಂದ ತುಮಕೂರು ನಗರದಲ್ಲಿ ನಡೆಯಿತು.ಟೌನ್ ಹಾಲ್ ವೃತ್ತದಿಂದ ಆರಂಭವಾದ ಮೆರವಣಿಗೆಯಲ್ಲಿ ವಿವಿಧ ಟ್ಯಾಬ್ಲೋಗಳು ಸಾಗಿದವು. ಸಾವಿರಾರು ಮಂದಿ ಗಣೇಶನ ಭಕ್ತರು, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ನಿಮಜ್ಜನ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಹೊಸ ದಾಖಲೆ ಬರೆದ ಬೆಳಗಾವಿ ಗಣೇಶೋತ್ಸವ : ಐತಿಹಾಸಿಕ ಬೆಳಗಾವಿ ಗಣೇಶೋತ್ಸವ ಈ ಬಾರಿ ಹೊಸ ದಾಖಲೆ ಬರೆದಿದ್ದು, ಗಣೇಶ ನಿಮಜ್ಜನ ಮೆರವಣಿಗೆ ಸತತ 36 ಗಂಟೆ ನಡೆದಿದೆ. ಜೊತೆಗೆ ಡಿಜೆ ಅಬ್ಬರ ಕಡಿಮೆ ಆಗಿದ್ದು, ಈ ಸಲದ ವಿಶೇಷತೆ ಆಗಿದೆ. ಮುಂದಿನ ವರ್ಷ ಬೇಗ ಬಾರಪ್ಪಾ ಗಣಪ ಎಂದು ಭಕ್ತರು ಪ್ರಾರ್ಥಿಸಿದ್ದಾರೆ.ಸೆಪ್ಟೆಂಬರ್ 6ರಂದು ಶನಿವಾರ ಸಂಜೆ 5 ಗಂಟೆಗೆ ಸಾರ್ವಜನಿಕ ಗಣೇಶ ಮೂರ್ತಿಗಳ ಮೆರವಣಿಗೆ ಆರಂಭವಾಗಿತ್ತು. 400ಕ್ಕೂ ಅಧಿಕ ಮಂಡಳಿಗಳು ಈ ಬಾರಿ ಗಣೇಶನನ್ನು ಪ್ರತಿಷ್ಠಾಪಿಸಿ 11 ದಿನಗಳ ಕಾಲ ಭಕ್ತಿಯಿಂದ ಪೂಜಿಸಿದರು. ಕೊನೆಯ ದಿನ ಶನಿವಾರ ಶುರುವಾದ ಅದ್ಧೂರಿ ಮೆರವಣಿಗೆ ಸೋಮವಾರ (ಸೆ. 8) ಬೆಳಗಿನ ಜಾವದವರೆಗೂ ನಡೆದು ಹೊಸ ಇತಿಹಾಸ ಸೃಷ್ಟಿಯಾಯಿತು. ಹಿಂದಿನ ವರ್ಷ 30 ಗಂಟೆಗಳ ಕಾಲ ಮೆರವಣಿಗೆ ನಡೆದಿತ್ತು.ಇದನ್ನೂ ಓದಿ : ಹೊಸ ದಾಖಲೆ ಬರೆದ ಬೆಳಗಾವಿ ಗಣೇಶೋತ್ಸವ: ಸತತ 36 ಗಂಟೆ ಮೆರವಣಿಗೆ
Be the first to comment