ಸೌಥ್ ಸಿನಿಮಾಗಳ ಹವಾ ಹಿಂದಿ ಬಿಟ್ಟು ತೆಲುಗಿನ ಕಡೆ ಮುಖ ಮಾಡಿದ ಜಾನವಿ ಕಪೂರ್

  • 2 years ago
ಶ್ರೀದೇವಿ ಪುತ್ರಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಅದರಲ್ಲೂ ಜಾಹ್ನವಿ ಕಪೂರ್ ಮುಂದಿನ ಸಿನಿಮಾ ಯಾವುದು, ಬಾಲಿವುಡ್‌ನಲ್ಲಿ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರೆ ಜಾಹ್ನವಿ ಕಪೂರ್, ಸೌತ್‌ಗೆ ಎಂಟ್ರಿ ಯಾವಾಗ, ಜಾಹ್ನವಿ ಕಪೂರ್ ಸೌತ್‌ನ ಯಾವ ಹೀರೋ ಜೊತೆ ಮೊದಲ ಸಿನಿಮಾ ಮಾಡುತ್ತಿದ್ದಾರೆ ಎಂಬೆಲ್ಲಾ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಲೇ ಇರುತ್ತೆ. ಸದ್ಯ ಇದೆಲ್ಲದರ ಹೊರತಾಗಿ ಜಾಹ್ನವಿ ಕಪೂರ್ ಅವರ ಸೌತ್ ಸಿನಿಮಾ ಎಂಟ್ರಿ ಬಗ್ಗೆ ಇದೀಗ ಒಂದು ಸುದ್ದಿ ಹೆಚ್ಚು ಸೌಂಡ್ ಮಾಡುತ್ತಿದೆ. ಈ ಬಾರಿ ಈ ಸುದ್ದಿ ಸುಳ್ಳಾಗದು ಎನ್ನುತ್ತಿವೆ ಮೂಲಗಳು.

Janhvi Kapoor share screen with Jr NTR, directed by Uppena fame Buchi Babu Sana..?