Skip to playerSkip to main content
  • 8 hours ago
ಮೈಸೂರು: ನಾಡ ಹಬ್ಬ ದಸರಾದ ಕೊನೆಯ ಕಾರ್ಯಕ್ರಮವಾದ ಚಾಮುಂಡೇಶ್ವರಿ ತೆಪ್ಪೋತ್ಸವ ಸೋಮವಾರ ಸಂಜೆ ಚಾಮುಂಡಿ ಬೆಟ್ಟದ ದೇವಿಕೆರೆಯಲ್ಲಿ ವಿಜೃಂಭಣೆಯಿಂದ ನೆರವೇರಿತು. ಈ ಕಾರ್ಯಕ್ರಮಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಪುಷ್ಪಾಲಂಕಾರ ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ತೆಪ್ಪದಲ್ಲಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯನ್ನು ಕೂರಿಸಿ ಸಹಸ್ರಾರು ಭಕ್ತರ ಜಯಘೋಷದ ನಡುವೆ ತೆಪ್ಪೋತ್ಸವ ನೆರವೇರಿತು. ತೆಪ್ಪದಲ್ಲಿ ಸಿಂಹದ ಆಕೃತಿ ಹೊಂದಿದ ಆಸನದಲ್ಲಿ ಚಾಮುಂಡೇಶ್ವರಿ ತಾಯಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ದೇವಿಕೆರೆಯ ಮೂರು ಸುತ್ತು ಪ್ರದಕ್ಷಣೆ ಹಾಕಿದಾಗ ಪೊಲೀಸ್ ಬ್ಯಾಂಡ್ ಹಾಗೂ ಮಂಗಲವಾದ್ಯ ಮೊಳಗಿತು. ಇದೇ ವೇಳೆ, ಸಿಡಿಮದ್ದನ್ನು ಸಿಡಿಸಿ ಚಾಮುಂಡಿ ತಾಯಿಗೆ ಗೌರವ ಸಲ್ಲಿಸಲಾಯಿತು. ತೆಪ್ಪೋತ್ಸವಕ್ಕೂ ಮುನ್ನ ಬೆಳಗ್ಗೆಯಿಂದಲೇ ಚಾಮುಂಡೇಶ್ವರಿ ದೇವಾಲಯದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ತೆಪ್ಪಕ್ಕೂ ಮುನ್ನ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಚಾಮುಂಡಿ ಬೆಟ್ಟದಿಂದ ದೇವಿಕೆರೆಗೆ ತರಲಾಗಿದ್ದು, ಅಲ್ಲಿ ತೆಪ್ಪೋತ್ಸವ ನಡೆದ ನಂತರ ಪುನಃ ಉತ್ಸವ ಮೂರ್ತಿಯನ್ನು ವಾಪಸ್​ ದೇವಾಲಯಕ್ಕೆ ತರಲಾಯಿತು. ಪ್ರತಿ ವರ್ಷ ತೆಪ್ಪೋತ್ಸವದಲ್ಲಿ ರಾಜವಂಶಸ್ಥರು ಭಾಗವಹಿಸುತ್ತಿದ್ದರು. ಆದರೆ, ಈ ಬಾರಿ ರಾಜವಂಶಸ್ಥರ ಗೈರು ಎದ್ದುಕಾಣುತ್ತಿತ್ತು. ಆದರೂ ತೆಪ್ಪೋತ್ಸವದಲ್ಲಿ ರಾಜವಂಶಸ್ಥರಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು.ಇದನ್ನೂ ಓದಿ: ಅರಮನೆ ಸರ್ಕಾರದ್ದು, ಪ್ಯಾಲೇಸ್ ಬೋರ್ಡ್ ಸರ್ಕಾರದ್ದು, ದಸರಾ ಆಚರಣೆ ನಿರ್ಧಾರವೂ ಸರ್ಕಾರದ್ದೇ: ಸಚಿವ ಯತೀಂದ್ರ ಸಿದ್ದರಾಮಯ್ಯ

Category

🗞
News
Transcript
00:00Music
00:51Let's go, let's go.
01:00Oh, my God.
01:32Oh, my God.

Recommended