ಗದಗ: ಜಿಲ್ಲೆಯ ಇತಿಹಾಸ ಸ್ಥಳವಾದ ಲಕ್ಕುಂಡಿಯಲ್ಲಿ ಇತ್ತೀಚೆಗೆ ನಿಧಿ ಸಿಕ್ಕಿರುವ ಸ್ಥಳಕ್ಕೆ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದು, ಸ್ಥಳೀಯರ ಗಮನ ಸೆಳೆದಿದೆ. ಫ್ರಾನ್ಸ್ ದೇಶದಿಂದ ಆಗಮಿಸಿದ ಸುಮಾರು 10ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ನಿಧಿ ಪತ್ತೆಯಾದ ಪ್ರದೇಶವನ್ನು ಇಂದು ಕುತೂಹಲದಿಂದ ವೀಕ್ಷಿಸಿದರು.ನಿಧಿ ಸಿಕ್ಕಿರುವ ಸ್ಥಳದ ಇತಿಹಾಸ, ಪೌರಾಣಿಕ ಹಿನ್ನೆಲೆ ಹಾಗೂ ಪತ್ತೆಯಾದ ವಸ್ತುಗಳ ಕುರಿತು ಪ್ರವಾಸಿಗರು ಹೆಚ್ಚಿನ ಆಸಕ್ತಿ ತೋರಿದರು. ಸ್ಥಳದಲ್ಲಿನ ಪುರಾತನ ಅವಶೇಷಗಳು ಹಾಗೂ ಉತ್ಖನನದ ವಿವರಗಳನ್ನು ಕೇಳಿ ತಿಳಿದು, ಆಶ್ಚರ್ಯ ವ್ಯಕ್ತಪಡಿಸಿದರು.ನಿಧಿ ಸಿಕ್ಕ ಸ್ಥಳದಲ್ಲಿ ವಿದೇಶಿಗರು ತೀವ್ರ ಕುತೂಹಲದಿಂದ ಪರಿಶೀಲನೆ ನಡೆಸಿದ್ದು, ಈ ಪ್ರದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಹತ್ವ ದೊರೆಯುತ್ತಿರುವುದನ್ನು ತೋರಿಸುತ್ತದೆ. ಪ್ರವಾಸಿಗರ ಈ ಭೇಟಿ ಗದಗ ಜಿಲ್ಲೆಯ ಪಾರಂಪರಿಕ ಹಾಗೂ ಐತಿಹಾಸಿಕ ಮಹತ್ವವನ್ನು ಜಗತ್ತಿಗೆ ಪರಿಚಯಿಸುವಲ್ಲಿ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ಬಳಿಕ ಉತ್ಖನನ ಕಾರ್ಯ ಪುನಾರಂಭವಾಗಿದ್ದು, ನಿತ್ಯ ಒಂದಿಲ್ಲೊಂದು ಅವಶೇಷಗಳು ಪತ್ತೆಯಾಗುತ್ತಲೇ ಇವೆ. ಈಗಾಗಲೇ ಒಂದು ಕಲ್ಲಿನ ಕೊಡಲಿ, ಕಟ್ಟಡದ ಮೇಲ್ಛಾವಣಿಗೆ ಬಳಸುವ ಕಲ್ಲಿನ ಬೋದಿ, ಐತಿಹಾಸಿಕ ಪಾಣಿಪೀಠ, ಬೃಹದಾಕಾರದ ಬಂಡೆ ಸೇರಿದಂತೆ ಮೂಳೆಯ ತುಂಡುಗಳು ಪತ್ತೆಯಾಗಿವೆ. ಜೊತೆಗೆ ಹಸಿರು ಶಿಲೆಯಲ್ಲಿ ಕೆತ್ತಲಾದ ನಾಗದೇವತೆಯ ಶಿಲ್ಪ, ಮನೆಯೊಳಗೆ ಚಾಲುಕ್ಯರ ಕಾಲದ ಪುರಾತನ ದೇವಾಲಯ ಪತ್ತೆಯಾಗಿರುವುದು ಗಮನ ಸೆಳೆದಿದೆ. ಇದನ್ನೂ ಓದಿ: ಲಕ್ಕುಂಡಿ ಗ್ರಾಮ ಪಂಚಾಯತ್ನಿಂದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಭರವಸೆಯ ಮಹಾಪೂರಲಕ್ಕುಂಡಿ ಉತ್ಖನನ ವೇಳೆ ಐತಿಹಾಸಿಕ ಪಾಣಿಪೀಠ, ಬೃಹತ್ ಬಂಡೆ, ಮೂಳೆಗಳು ಪತ್ತೆ
Comments