ಚಿಕ್ಕೋಡಿ(ಬೆಳಗಾವಿ): ಮನೆಗಳ್ಳತನಕ್ಕೆ ಬಂದಿದ್ದ ಖದೀಮರು ಪೊಲೀಸರಿಗೇ ಲಾಂಗ್ ತೋರಿಸಿ ಪರಾರಿಯಾಗಿರುವ ಘಟನೆ ನಿಪ್ಪಾಣಿಯಲ್ಲಿ ನಡೆದಿದೆ.ಶನಿವಾರ ನಸುಕಿನ ವೇಳೆ ನಿಪ್ಪಾಣಿ ನಗರದಲ್ಲಿ ಬೀಗ ಹಾಕಿದ್ದ ಮನೆಗಳ ಕಳ್ಳತನಕ್ಕೆ ಬಂದಿದ್ದ ಮೂವರು, ಬೈಕ್ನಲ್ಲಿ ಗಸ್ತು ತಿರುಗುತ್ತಿದ್ದ ಇಬ್ಬರು ಪೊಲೀಸರನ್ನು ಕಂಡು ಅಡಗಿ ಕುಳಿತಿದ್ದರು. ಅನುಮಾನಿಸಿ ವಾಪಸ್ ಬಂದ ಪೊಲೀಸರ ಮೇಲೆ ಕಳ್ಳರು ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದಾರೆ.ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸ್ ಸಿಬ್ಬಂದಿಯ ಕೈಯಲ್ಲಿ ಬಂದೂಕಿದ್ದರೂ ಹೆದರದೆ ಖದೀಮರು ಹಲ್ಲೆಗೆ ಯತ್ನಿಸಿ ಓಡಿ ಹೋಗಿದ್ದಾರೆ. ನಿಪ್ಪಾಣಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.ಮನೆ ಬೀಗ ಮುರಿದು ₹45 ಲಕ್ಷದ ಆಭರಣ ದೋಚಿದ ಕಳ್ಳರು(ಪ್ರತ್ಯೇಕ ಘಟನೆ): ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ನಗರಸಭೆಯ ಕಿರಿಯ ಅಭಿಯಂತರ ಮಹೇಶ್ ಮಾಳಗಿ ಎಂಬವರ ಬೊಂಬಾಯಿ ಬಸಣ್ಣ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಮನೆಯಲ್ಲಿ ಕಳೆದ ಮಂಗಳವಾರ ರಾತ್ರಿ ಕಳ್ಳತನ ನಡೆದಿತ್ತು.ಕುಟುಂಬದವರು ಮನೆಯಿಂದ ಹೊರಗಿದ್ದ ಸಂದರ್ಭ ಮನೆಯ ಬೀಗ ಮುರಿದು ಚಿನ್ನ, ಬೆಳ್ಳಿಯ ಆಭರಣಗಳು ಹಾಗೂ ನಗದು ಸೇರಿದಂತೆ ಸುಮಾರು ₹46.11 ಲಕ್ಷ ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದರು. ಮಂಗಳವಾರ ಸಂಜೆ 7.30ರಿಂದ ರಾತ್ರಿ 10.30ರ ನಡುವೆ ಸುರಪುರದ ದೀವಳಗುಡ್ಡದಲ್ಲಿ ಸಹೋದರನ ಪತ್ನಿಯ ಮನೆಯಲ್ಲಿ ದೇವರ ಕಾರ್ಯಕ್ಕೆ ಕುಟುಂಬದವರು ತೆರಳಿದ್ದರು. ಇವುಗಳನ್ನೂ ಓದಿ:ಮದುವೆ ಮನೆಗಳೇ ಟಾರ್ಗೆಟ್: ಬಂಟ್ವಾಳದಲ್ಲಿ ಮನೆಗೆ ನುಗ್ಗಿ ನಗ, ನಗದು ದೋಚಿದ ಕಳ್ಳಬೆಂಗಳೂರು: 11 ಲಕ್ಷ ರೂಪಾಯಿ ಕದ್ದ ಸಿಸಿಬಿ ಹೆಡ್ ಕಾನ್ಸ್ಟೇಬಲ್
Be the first to comment