ಉಡುಪಿ: ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥರು ವಿಶ್ವ ಕಲ್ಯಾಣಕ್ಕಾಗಿ ಸಂಕಲ್ಪಿಸಿರುವ ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲ್ಗೊಂಡ ಮಹಾರಾಷ್ಟ್ರದ ಅಹಮ್ಮದ್‌ನಗರ ಮೂಲದ ಕ್ರಾಂತಿ ನಿತ್ಯಾನಂದ ನಾಯಕ್ ಅವರು ವಿಶೇಷವಾಗಿ ಕನ್ನಡದಲ್ಲಿ ಮಿರರ್ ಇಮೇಜ್ ಶೈಲಿಯಲ್ಲಿ (ಲಿಯೋಗ್ರಫಿ-ತಿರುಗು-ಮುರುಗು) ಬರೆದ ಗೀತಾ ಲೇಖನವನ್ನು ಶ್ರೀಪಾದರಿಗೆ ಸಮರ್ಪಿಸಿದರು.ಕನ್ನಡ ಓದಲು ಬರೆಯಲು ಬಾರದ ಇಂಗ್ಲಿಷ್, ಹಿಂದಿ, ಮರಾಠಿ ಭಾಷೆಯನ್ನು ಮಾತ್ರ ಬಲ್ಲ ಕ್ರಾಂತಿ ನಿತ್ಯಾನಂದ ನಾಯಕ್ ಅವರು ಭಗವದ್ಗೀತೆಯ 18 ಅಧ್ಯಾಯಗಳನ್ನು ಕನ್ನಡದಲ್ಲಿ ತಿರುಗು-ಮುರುಗು ಬರೆಯುವ ಮೂಲಕ (ಕನ್ನಡಿ ಸಹಾಯವಿಲ್ಲದಿದ್ದರೆ ಓದಲು ಆಗದಿರುವ) ಸಾಧನೆಗೈದಿರುವುದು ವಿಶೇಷ. ಮರಾಠಿ ಲಿಪಿಯಲ್ಲಿ ಜ್ಞಾನೇಶ್ವರಿಯವರು ಬರೆದ ಭಗವದ್ಗೀತೆ ಗ್ರಂಥವನ್ನು ಕ್ರಾಂತಿಯವರು ಸಂಪೂರ್ಣವಾಗಿ ಮಿರರ್ ಇಮೇಜ್ ಸ್ಟೈಲ್‌ನಲ್ಲಿ 100 ದಿನಗಳಲ್ಲಿ, ಶ್ಲೋಕ ಮತ್ತು ಸಾರಾಂಶ ಸಹಿತ ಬರೆಯುವ ಮೂಲಕ 'ಜೀನಿಯಸ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್'ನಲ್ಲಿ ದಾಖಲಿಸಿದ್ದರು. ಇತ್ತೀಚಿನ ದಿನಗಳಲ್ಲಿ ಕೋಟಿ ಗೀತಾ ಲೇಖನ ಯಜ್ಞದಲ್ಲಿ ಭಾಗವಹಿಸುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ವಿಶಿಷ್ಟವಾಗಿ ಸಾಧನೆ ಮಾಡುವ ಅನೇಕ ಜನರು ಹಾಗೂ ಭಗವದ್ಗೀತೆ ಬರೆದು ಪ್ರಭಾವಿತರಾದ ಪ್ರತಿಭಾನಿತ್ವರನ್ನು ಈ ಪರ್ಯಾಯದಲ್ಲಿ ಕಾಣಬಹುದಾಗಿದೆ ಎಂದು ಶ್ರೀ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ತಿಳಿಸಿದರು. ಈ ಸಂದರ್ಭ ಕ್ರಾಂತಿ ನಿತ್ಯಾನಂದ ನಾಯಕ್ ಮತ್ತು ಎಂಜಿನಿಯರ್ ನಿತ್ಯಾನಂದ ನಾಯಕ್ ದಂಪತಿಯನ್ನು ಶ್ರೀಪಾದರು ಗೌರವಿಸಿ ಆಶೀರ್ವದಿಸಿದರು.ಇವುಗಳನ್ನೂ ಓದಿ: ಉಡುಪಿ:ಶ್ರೀಕೃಷ್ಣಮಠದಲ್ಲಿ ಇನ್ನು ಒಂದು ತಿಂಗಳು ಪಶ್ಚಿಮ ಜಾಗರ ಪೂಜೆ: ಯೋಗನಿದ್ರೆಯಲ್ಲಿರುವ ಭಗವಂತನನ್ನು ಎಚ್ಚರಿಸಲು ಈ ಸೇವೆನವರಾತ್ರಿ ವಿಶೇಷ.. ಉಡುಪಿ ಶ್ರೀಕೃಷ್ಣನ ಒಂಬತ್ತು ಸ್ತ್ರೀ ಅಲಂಕಾರ ಕಂಡೀರಾ?
Be the first to comment