ಬಾಗಲಕೋಟೆ: ಗಣೇಶ ಹಬ್ಬವನ್ನು ಎಲ್ಲೆಡೆ ವಿಜೃಂಭಣೆಯಿಂದ, ಜೊತೆಗೆ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಕೆಲವೆಡೆ, ಬೆಲ್ಲದಿಂದ, ಹೂವಿನಿಂದ, ಮಣ್ಣಿನಿಂದ ಗಣಪನನ್ನು ತಯಾರಿಸಿ, ಆರಾಧಿಸಿದರೆ, ಬಾಗಲಕೋಟೆ ಜಿಲ್ಲೆಯ ಇಳಕಲ್ನ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎಲೆಗಳಲ್ಲಿ ಗಣಪನ ನಿರ್ಮಿಸಿ ವಿಶಿಷ್ಟ ಕಲಾ ಭಕ್ತಿ ಮರೆದಿದ್ದಾರೆ.ಸುಮಾರು 35 ವರ್ಷಗಳಿಂದ ನಿರುಪಯುಕ್ತ ವಸ್ತುಗಳಿಂದ ಗಣೇಶನನ್ನು ನಿರ್ಮಿಸುತ್ತಾ ಬಂದಿರುವ ಈ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಈ ಬಾರಿ ಮರದ ಎಲೆಗಳಿಂದ ಸುಮಾರು 10 ಅಡಿ ಎತ್ತರದ ಗಣೇಶನನ್ನು ನಿರ್ಮಿಸಿ ತಮ್ಮ ಕಲಾಭಕ್ತಿಯನ್ನು ಪ್ರದರ್ಶಿಸಿದ್ದಾರೆ. ಬಣ್ಣ ಬಣ್ಣದ ಸಾವಿರಾರು ಎಲೆಗಳನ್ನು ವಿದ್ಯಾರ್ಥಿಗಳು ಹುಡುಕಿ ತಂದಿದ್ದು, ಪ್ರಾಂಶುಪಾಲ ಡಾ. ಬಸವರಾಜ ಗವಿಮಠ, ಮತ್ತು ಉಪನ್ಯಾಸಕ ಮೌನೇಶ್ ಬಡಿಗೇರ ಅವರ ಮಾರ್ಗದರ್ಶನದಲ್ಲಿ ಈ ಎಲೆಯ ಗಣಪನನ್ನು ನಿರ್ಮಾಣ ಮಾಡಿದ್ದಾರೆ. ಅತಿವೃಷ್ಠಿ ಅನಾವೃಷ್ಠಿಯಿಂದ ಪರಿಸರ ತನ್ನ ಸಮತೋಲನ ಕಳೆದುಕೊಳ್ಳುತ್ತಿದ್ದು, ಇದಕ್ಕೆ ಪರಿಸರ ಸಂರಕ್ಷಣೆಯೇ ಮಾರ್ಗ ಎಂದು ಸಂದೇಶ ನೀಡಲು ಎಲೆಗಳಿಂದ ಗಣೇಶನನ್ನು ನಿರ್ಮಿಸಿ, ಪರಿಸರ ಸಂಸರಕ್ಷಣೆ ವಿಘ್ನ ವಿನಾಯಕನಿಂದ ಆಗಲಿ ಎಂಬ ಆಶಯದಿಂದ ಎಲೆಗಳಲ್ಲಿ ಗಣೇಶನನ್ನು ನಿರ್ಮಿಸಲಾಗಿದೆ ಎನ್ನುತ್ತಾರೆ ಮಹಾವಿದ್ಯಾಲಯದ ಪ್ರಾಂಶುಪಾಲರು.ಇದನ್ನೂ ನೋಡಿ: ದಾವಣಗೆರೆ: ಮೂರುವರೆ ಕ್ವಿಂಟಾಲ್ ಗೋವಿನ ಗೆಜ್ಜೆಯಲ್ಲಿ ಸಿದ್ಧವಾಯ್ತು ಹದಿಮೂರುವರೆ ಅಡಿ ಎತ್ತರದ ಗಣೇಶನ ಮೂರ್ತಿ
Be the first to comment