ಮೈಸೂರು: ಹುಲಿಯೊಂದು ಎರಡು ಗಂಟೆ ನೀರಿನಲ್ಲಿ ಮಲಗಿ ಕಾಲ ಕಳೆದ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ. ವಾರಾಂತ್ಯದಲ್ಲಿ ಸಫಾರಿಗೆಂದು ಹೋದ ಪ್ರವಾಸಿಗರಿಗೆ ಹುಲಿ ರಿಲ್ಯಾಕ್ಸ್ ಮೂಡ್ನಲ್ಲಿ ದರ್ಶನ ನೀಡಿದೆ.ಮೈಸೂರು ಜಿಲ್ಲೆಯ ಎಚ್. ಡಿ. ಕೋಟೆ ತಾಲ್ಲೂಕಿನ ದಮ್ಮನ ಕಟ್ಟೆ ಅರಣ್ಯ ಪ್ರದೇಶದಲ್ಲಿ ಕಬಿನಿ ಹಿನ್ನೀರಿನ ಕೆರೆಯಲ್ಲಿ ಹುಲಿ ಈಜಾಡುತ್ತಾ, ನೀರಿನಲ್ಲಿ ವಿಶ್ರಾಂತಿ ಪಡೆದಿದೆ. ಕಬಿನಿ ಹಿನ್ನೀರಿನ ದಮ್ಮನಕಟ್ಟೆ ರೇಂಜ್ ಮಗ್ಗೆ ಈಪಿಟಿಯ ಮೊದಲನೇ ಕೆರೆಯಲ್ಲಿ ಹುಲಿ ಸುಮಾರು 2 ಗಂಟೆಗಳ ಕಾಲ ಕೆರೆಯಲ್ಲಿ ಸಮಯ ಕಳೆದಿದೆ. ಕೆರೆಯ ನೀರಲ್ಲಿ ರಿಲ್ಯಾಕ್ಸ್ ಮೂಡ್ನಲ್ಲಿದ್ದ ಹುಲಿಯ ದೃಶ್ಯವನ್ನು ಸಫಾರಿಗರು ತಮ್ಮ ಕ್ಯಾಮರಾಗಳು ಹಾಗೂ ಮೊಬೈಲ್ಗಳಲ್ಲಿ ಸೆರೆ ಹಿಡಿದಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನಾಗರಹೊಳೆ ಅರಣ್ಯ ಪ್ರದೇಶ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಪ್ರಕೃತಿ ಸೌಂದರ್ಯದ ಮಧ್ಯೆ ತುಂಬಿರುವ ಕೆರೆಯಲ್ಲಿ ಹುಲಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಸಫಾರಿಗರಿಗೆ ಇನ್ನಷ್ಟು ಮುದ ನೀಡಿತು.ಇದನ್ನೂ ಓದಿ: ಆಹಾರ ಅರಸಿ ಬಂದಾಗ ಬೇರ್ಪಟ್ಟ ಮರಿ ಆನೆ: ಮರಳಿ ತಾಯಿ ಮಡಿಲಿಗೆ ಸೇರಿಸಿದ ಅರಣ್ಯ ಇಲಾಖೆ ಸಿಬ್ಬಂದಿ
Be the first to comment