ಬಾಲಿವುಡ್ ನಟಿ ಶ್ರೀದೇವಿ ಅವರು ಹೃದಯಾಘಾತದಿಂದ ಸತ್ತಿಲ್ಲ, ಬದಲಾಗಿ ಬಾತ್ ಟಬ್ಬಿನಲ್ಲಿ ಮುಳುಗಿ ಸತ್ತಿದ್ದು ಎಂಬ ಸುದ್ದಿ ಭಾರತೀಯ ಮಾಧ್ಯಮ ಲೋಕಕ್ಕೆ ಔತಣ ಕೂಟ ಏರ್ಪಡಿಸಿದಂತಾಗಿದೆ! ಶ್ರೀದೇವಿ ಸಾವಿನ ಕುರಿತು ನಿಖರ ಮಾಹಿತಿ ಲಭ್ಯವಾಗದಿದ್ದರೂ, ಪ್ರಕರಣ ತನಿಖೆಯ ಹಂತದಲ್ಲಿದ್ದರೂ ಭಾರತೀಯ ಮಾಧ್ಯಮಗಳು ಅಧಿಕ ಪ್ರಸಂಗ ಮಾಡುತ್ತಿವೆ ಎಂದು ಸೆಲೆಬ್ರಿಟಿಗಳು ದೂರುತ್ತಿದ್ದಾರೆ. ಆಕೆ ಕಳೆದ ನಲವತ್ತೈದು ವರ್ಷಗಳಿಂದ ಐದು ಭಾಷೆಗಳಲ್ಲಿ ನಟಿಸಿದ 245 ಚಿತ್ರಗಳ ಬಗ್ಗೆ ಮಾತನಾಡುವ ಬದಲು ಆಕೆಯ ಸಾವಿನ್ನು ವಿವಾದವನ್ನಾಗಿ ಮಾರ್ಪಡಿಸಲು ಮಾಧ್ಯಮಗಳು ಉತ್ಸುಕತೆ ತೋರುತ್ತಿರುವುದು ಸರಿಯೇ ಎಂದು ಸಾಮಾನ್ಯ ಜನರೂ ಪ್ರಶ್ನಿಸುತ್ತಿದ್ದಾರೆ.
Be the first to comment