ಬೆಂಗಳೂರಿನಲ್ಲಿ ಇ ಟಾಯ್ಲೆಟ್ ನಲ್ಲೂ ಮೋಸ | Oneindia Kannada

  • 6 years ago
In India, lack of toilets has resulted in defecation in open places, which has created a major sanitary problem. With increased awareness among the people, the government and a number of organizations have come up with public urinals and toilets in various areas. However, these toilets are now corrupted. A lot of corruption is happening with these E Toilets.


ರಾಜ್ಯದೆಲ್ಲೆಡೆ ಸ್ವಚ್ಛತೆಯನ್ನ ಕಾಪಾಡಲು ಸರ್ಕಾರ ಹಲವು ಸ್ಥಳಗಳಲ್ಲಿ ಇ ಟಾಯ್ಲೆಟ್ ಗಳು ನಿರ್ಮಾಣಗೊಂಡವು. ಜನಗಳಿಗೆ ಸಹಾಯವಾಗಲು ಹಾಗು೮ ಪರಿಸರವನ್ನು ರಕ್ಷಿಸಲು ಇ ಟಾಯ್ಲೆಟ್ ಸಹಕಾರಿ. ಶೌಚಾಲಯದ ಪ್ರವೇಶ ದ್ವಾರದಲ್ಲೇ ಅಳವಡಿಸಿರುವ ಮಷಿನ್‌ನಲ್ಲಿ ಕೆಂಪು, ಹಳದಿ, ಹಸಿರು ಬಣ್ಣಗಳ ಲೈಟ್‌ ಇಂಡಿಕೇಟರ್‌ ಇರುತ್ತದೆ. ಕೆಂಪು ಲೈಟ್‌ ಬೆಳಗುತ್ತಿದ್ದರೆ ಒಳಗೆ ಶೌಚಾಲಯ ಬಳಸುತ್ತಿದ್ದಾರೆ ಎಂದರ್ಥ. ಒಳಗೆ ಹೋಗುವುದಕ್ಕೆ ಗ್ರೀನ್‌ ಸಿಗ್ನಲ್‌, ಹಳದಿ ಬಣ್ಣ ಶೌಚಾಲಯವು ಸ್ವಚ್ಛವಾಗಿದೆ ಎಂದು ಇಂಡಿಕೇಟ್‌ ಮಾಡುತ್ತದೆ.ಬಳಕೆದಾರರು ಹಳದಿ ಬಣ್ಣ ತೋರಿಸುವ ಸಮಯದಲ್ಲಿ 1, 2, 5 ರೂ.ಗಳಲ್ಲಿ ಯಾವುದೇ ಒಂದು ನಾಣ್ಯವನ್ನು ಮಷಿನ್‌ ಒಳಗೆ ಹಾಕಿದರೆ ಬಾಗಿಲ ಲಾಕ್‌ ಓಪನ್‌ ಆಗಿ ತೆರೆದುಕೊಳ್ಳುತ್ತದೆ. ಇನ್ನು ಇದೀಗ ಈ ಟಾಯ್ಲೆಟ್ ನಲ್ಲೂ ಮೋಸ ನಡೆಯುತ್ತಿದ್ದು ಕಾಯಿನ್ ಹಾಕಿದರೂ ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಈ ಘಟನೆ ನಡೆದದ್ದು ಬೆಂಗಳೂರಿನ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಇರುವ ಈ ಟಾಯ್ಲೆಟ್ ನಲ್ಲಿ. ಅಲ್ಲಿ ನಡೆದ ಘಟನೆ ಏನೆಂದು ತಿಳಿಯಲು ಈ ವೀಡಿಯೋ ನೋಡಿ

Recommended