ಅವಳು ನಾಲ್ಕು ಮಕ್ಕಳ ತಾಯಿ... ಗಂಡ ಸತ್ತು ನಾಲ್ಕು ತಿಂಗಳಾಗಿತ್ತಷ್ಟೇ.. ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನ ಸಾಕುತ್ತಿದ್ದಳು ಆಕೆ.. ಆವತ್ತು ದೀಪಾವಳಿ ಹಬ್ಬ... ಮಕ್ಕಳು ಪಾಟಾಕಿ ಕೇಳಿದ್ವು.. ಅಮ್ಮಾ ಅಂಗಡಿಗೆ ಹೋಗಿ ಪಟಾಕಿ ತಂದು ಮಕ್ಕಳಿಗೆ ಸಮನಾಗಿ ಹಂಚಿ ಹೊರಗೆ ಹೋಗಿ ಬರ್ತೀನಿ ಅಂತ ಹೋದಳು.. ಅಷ್ಟೇ.. ಎಷ್ಟೇ ಹೊತ್ತಾದ್ರೂ ಆಕೆ ಬರೋದೇ ಇಲ್ಲ.. ತಡರಾತ್ರಿವರೆಗೆ ಹುಡುಕಿದ್ದಾರೆ.. ಕೊನೆಗೆ ಪೊಲೀಸ್ ಕಂಪ್ಲೆಂಟ್ ಕೊಡಬೇಕು ಅಂದುಕೊಳ್ತಾರೆ.. ಅಷ್ಟರಲ್ಲೇ ಅದೇ ತಾಯಿಯ ಶವ ಆಟೋವೊಂದರಲ್ಲಿ ಸಿಗುತ್ತೆ.. ಯಾರೋ ಆಕೆಯನ್ನ ಕೊಂದು ಆಟೋದಲ್ಲಿ ಎಸೆದು ಹೋಗಿರ್ತಾರೆ..
Be the first to comment