Skip to playerSkip to main content
  • 5 months ago
ಚಿಕ್ಕಮಗಳೂರು : ಹಬ್ಬ, ಹರಿದಿನ, ಉತ್ಸವ ಎಂದರೆ ಜಿಲ್ಲೆಯಲ್ಲಿ ಎಲ್ಲಿಲ್ಲದ ಸಂಭ್ರಮ, ಸಡಗರ ಇರಲಿದೆ. ಅದೇ ರೀತಿ ಭಾನುವಾರ (ಆ.17) ನಗರದ ಕೋಟೆ ಕೆಂಚರಾಯ ಸ್ವಾಮಿ ಶ್ರಾವಣ ಉತ್ಸವ ಸಂಭ್ರಮದಿಂದ ಜರುಗಿದ್ದು, ಕೆಂಚರಾಯನಿಗೆ 101 ಎಡೆ ಸಮರ್ಪಿಸಿ, ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.ವರ್ಷಕ್ಕೊಮ್ಮೆ ಮಾತ್ರ ಕೋಟೆ ಕೆಂಚರಾಯ ಉತ್ಸವ ನಡೆಯಲಿದ್ದು, ಈ ಉತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಂಡು, ದೇವರ ಉತ್ಸವವನ್ನು ನೆರವೇರಿಸಿದರು. ಕೆಂಚರಾಯನ ಉತ್ಸವ ಮೂರ್ತಿ ಕುಣಿತ ನೆರೆದಿದ್ದ ಭಕ್ತರ ಗಮನವನ್ನು ಸೆಳೆಯಿತು.ಜಿಲ್ಲೆಯಲ್ಲಿ ಪ್ರತಿ ವರ್ಷ ಕೆಂಚರಾಯನಿಗೆ ಹರಿಸೇವೆ ಸಲ್ಲಿಸಿ, ಪೂಜೆ ಸಲ್ಲಿಕೆ ಮಾಡಲಾಗುತ್ತಿದೆ. ವಿಶೇಷ ಸಂಪ್ರದಾಯ ಪೂಜೆಯಿಂದಲೇ ಈ ಉತ್ಸವ ಗಮನ ಸೆಳೆಯಲಿದೆ. ಶ್ರಾವಣ ಮಾಸದಲ್ಲೇ ನಡೆಯುವ ಈ ಉತ್ಸವದಲ್ಲಿ ಕೋಟೆ ಹಾಗೂ ಸುತ್ತಮುತ್ತಲಿನ ಸಾವಿರಾರು ಜನರು ಭಾಗವಹಿಸಲಿದ್ದಾರೆ. ಉತ್ಸವದ ಹಿನ್ನೆಲೆ ನಗರದ ಕೋಟೆ ಬಡಾವಣೆ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ಈ ಉತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಭಾಗದಿಂದ ಸೇರಿದಂತೆ, ಮಲೆನಾಡು ಹಾಗೂ ಬಯಲು ಸೀಮೆ ಭಾಗಗಳಿಂದಲೂ ಭಕ್ತಾದಿಗಳು ಆಗಮಿಸಿ, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ವಿಶೇಷ ಪೂಜೆಯನ್ನು ನೆರವೇರಿಸಿದರು.  ಇದನ್ನೂ ಓದಿ :  ತುಮಕೂರು : ಪುಟ್ಟ ಮಕ್ಕಳಿಗೆ ಕೃಷ್ಣ-ರಾಧೆಯ ವೇಷಗಳನ್ನು ತೊಡಿಸಿ ಜನ್ಮಾಷ್ಟಮಿ ಸಂಭ್ರಮಾಚರಣೆ - JANMASHTAMI CELEBRATION

Category

🗞
News
Transcript
00:00Music
00:14Music
Comments

Recommended