Skip to playerSkip to main contentSkip to footer
  • 2 weeks ago
ಕಟಪಾಡಿ (ಉಡುಪಿ): ಮಣಿಪುರ ಗ್ರಾಮದ ಸಿಎಸ್‌ಐ ಚರ್ಚ್ ಬಳಿಯ ಜೇಕಬ್ ಎಂಬುವರ ತೋಟದ ಬಾವಿಯಲ್ಲಿ ಚಿರತೆ ಮರಿಯೊಂದು ಕಂಡುಬಂದಿದೆ. ಅರಣ್ಯ ಇಲಾಖೆ ವತಿಯಿಂದ ಅದನ್ನು ಬಾವಿಯಿಂದ ರಕ್ಷಿಸಿ ಪುನಃ ಸೋಮೇಶ್ವರ ಅಭಯಾರಣ್ಯಕ್ಕೆ ಬಿಡಲಾಯಿತು.ಬಾವಿಯಲ್ಲಿನ ಪಂಪ್​ಸೆಟ್​ ಚಾಲೂ ಆಗದಿದ್ದಾಗ ಪರಿಶೀಲಿಸಲಾಗಿದ್ದು, ಈ ವೇಳೆ ಚಿರತೆಯು ಪಂಪ್​ಸೆಟ್​ ವೈಯರ್​ ಅನ್ನು ತುಂಡು ಮಾಡಿರುವುದು ಗಮನಕ್ಕೆ ಬಂದಿದೆ. ಸುಮಾರು 2 ರಿಂದ 3 ವರ್ಷ ಪ್ರಾಯದ ಹೆಣ್ಣು ಚಿರತೆ ಮರಿ ಇದಾಗಿದ್ದು, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಹಕಾರದಿಂದ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಯಿತು. ಆರ್‌ಎಫ್‌ಒ ವಾರಿಜಾಕ್ಷಿ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು.ಆರ್‌ಎಫ್‌ಒ ವಾರಿಜಾಕ್ಷಿ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಶಿವಾನಂದ, ಗಸ್ತು ಅರಣ್ಯ ಪಾಲಕರಾದ ದೇವರಾಜ್ ಪಾಣ, ರಾಮಚಂದ್ರ ನಾಯಕ್, ಶ್ರೀನಿವಾಸ ಜೋಗಿ, ಮಂಜುನಾಥ, ಅಖಿಲೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಕಾರ್ಯಾರಣೆ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ ಸ್ಥಳೀಯ ಪ್ರಮೋದ್ ಕಟಪಾಡಿ, ಈ ಭಾಗದಲ್ಲಿ ಚಿರತೆ ಹಾವಳಿ ತುಂಬಾ ಇದೆ. ಈ ಹಿಂದೆಯೂ ಇಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಈಗ ಬಾವಿಗೆ ಬಿದ್ದಿದ್ದ ಚಿರತೆ ಮರಿ ತನ್ನ ತಾಯಿಯಿಂದ ಬೇರ್ಪಟ್ಟು ಗ್ರಾಮಕ್ಕೆ ಬಂದಿರಬಹುದು. ಇಲ್ಲಿ ಇನ್ನಷ್ಟು ಚಿರತೆ ಇರುವ ಸಾಧ್ಯತೆ ಇದ್ದು, ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೋ‌ನಿನಲ್ಲಿ ಕರು ಇದ್ದರೂ, ತಿನ್ನದೇ ತಾಯಿ ಮಮಕಾರ ತೋರಿದ ಚಿರತೆ! - LEOPARD CAUGHT IN TRAP

Category

🗞
News
Transcript
00:00I
Be the first to comment
Add your comment

Recommended