ಮಂಡ್ಯ: ಅಂಗಡಿಗೆ ಪೇಂಟ್ ತರಲು ಹೋದ ವ್ಯಕ್ತಿ ಹೃದಯಸ್ತಂಭನದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ನಡೆದಿದೆ.ನೋಡನೋಡುತ್ತಿದ್ದಂತೆ ಹೃದಯ ಸ್ತಂಭನವಾಗಿ ಪೇಂಟ್ ಅಂಗಡಿಯಲ್ಲೇ ಕುಸಿದುಬಿದ್ದು ವ್ಯಕ್ತಿ ಸಾವನ್ನಪ್ಪಿದ್ದು, ಮನಕಲುಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹುಲ್ಲಾಗಾಲ ಗ್ರಾಮದ ಈರಣ್ಣಯ್ಯ (58) ಮೃತ ವ್ಯಕ್ತಿ.ಹಲಗೂರಿನ ಪೇಂಟ್ ಅಂಗಡಿಯೊಂದಕ್ಕೆ ಈರಣ್ಣಯ್ಯ ತೆರಳಿದ್ದರು. ಈ ವೇಳೆ ಏಕಾಏಕಿ ನಿಂತಲ್ಲೇ ಅವರು ಕುಸಿದು ಬಿದ್ದಿದ್ದಾರೆ. ಅಂಗಡಿ ಮಾಲೀಕ ಅವರನ್ನು ಹಿಡಿದು ಮೇಲೆತ್ತುವಷ್ಟರಲ್ಲಿ ಸ್ಥಳದಲ್ಲೇ ಈರಣ್ಣಯ್ಯರ ಪ್ರಾಣಪಕ್ಷಿ ಹಾರಿಹೋಗಿದೆ. ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಹುಬ್ಬಳ್ಳಿ: ನೇತ್ರದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಎಎಸ್ಐ ಚಂದ್ರಕಾಂತ ಹುಟಗಿಕಲಘಟಗಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ ಹುಟಗಿ (58) ಅವರು ನವೆಂಬರ್ 16ರಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರ ಕುಟುಂಬ ಚಂದ್ರಕಾಂತ ಅವರ 2 ಕಣ್ಣುಗಳನ್ನು ದಾನ ಮಾಡಿದ್ದಾರೆ. ಚಂದ್ರಕಾಂತ ಹುಟಗಿ ಅವರು ಕಲಾವಿದರು. ನಟರಾಗಿ, ಸಂಗೀತಗಾರರಾಗಿ, ಕೊಳಲುವಾದಕರಾಗಿ ಆಗಿಯೂ ಚಿರಪರಿಚಿತರು. ಇವರು ಪೊಲೀಸ್ ಇಲಾಖೆಯಷ್ಟೇ ಅಲ್ಲದೆ, ಇತರೆ ಇಲಾಖೆಗಳೊಂದಿಗೂ ಉತ್ತಮ ಬಾಂಧವ್ಯ, ಸ್ನೇಹ ಹೊಂದಿದ್ದರು.
Be the first to comment